ಕರ್ನಾಟಕ

ನ್ಯಾಯವಾದಿಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ದೂರು ದಾಖಲು

ವಿಜಯಪುರ,ಸೆ.13-ದುಷ್ಕರ್ಮಿಗಳ ತಂಡವೊಂದು ನ್ಯಾಯವಾದಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಗುರುವಾರ ರಾತ್ರಿ ಇಂಡಿ ಪಟ್ಟಣದಲ್ಲಿ ನಡೆದಿದೆ.

ನ್ಯಾಯವಾದಿ ಸಂಗಮೇಶ ಚಾಂದಕವಟೆ ಹಲ್ಲೆಗೊಳಗಾದವರು. ಹಾಗೂ ಮೂಸಾ ಎಂಬವರು ಸೇರಿದಂತೆ ಒಟ್ಟು ನಾಲ್ವರ ತಂಡ ಕೃತ್ಯ ಎಸಗಿದೆ ಎಂದು ನ್ಯಾಯವಾದಿಗಳು ದೂರಿನಲ್ಲಿ ತಿಳಿಸಿದ್ದಾರೆ.

ಸಂಗಮೇಶ ಅವರು ದುಷ್ಕರ್ಮಿಗಳ ದಾಳಿಯಿಂದ ರಕ್ಷಣೆಗಾಗಿ ಕೈ ಅಡ್ಡ ಹಿಡಿದ ಪರಿಣಾಮ ಅವರ ಕೈ ಬೆರಳುಗಳಿಗೆ ತೀವ್ರವಾಗಿ ಗಾಯಗಳಾಗಿವೆ. ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆಯ ವೈಷಮ್ಯದಿಂದ ಹಲ್ಲೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಪಟ್ಟಣ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: