ವಿದೇಶ

ಹೆದ್ದಾರಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ಲಘು ವಿಮಾನ

ವಾಷಿಂಗ್ಟನ್,ಸೆ.13-ಲಘು ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೆದ್ದಾರಿಗೆ ಬಂದು, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಅಮೆರಿಕಾದ ಮೇರಿಲ್ಯಾಂಡ್ ನಲ್ಲಿ ನಡೆದಿದೆ.

ವಿಮಾನ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕೆಲವು ವಾಹನಗಳು ಜಖಂಗೊಂಡಿವೆ. ಇದೊಂದು ಖಾಸಗಿ ವಿಮಾನವಾಗಿದ್ದು, ಅದು ಪತನವಾಗಲು ತಾಂತ್ರಿಕ ದೋಷ ಕಾರಣವಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ ಖಾಸಗೀ ವಿಮಾನ ಪಥನದಂಥ ಇಂಥ ಘಟನೆಗಳು ನಡೆದಾಗ ನಾವು ಪ್ರಕರಣ ದಾಖಲಿಸಿಕೊಂಡು, ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೇಕಾಫ್ ಆದ ವಿಮಾನ ಇದ್ದಕ್ಕಿದ್ದಂತೆ ಬಂದು ಹೆದ್ದಾರಿಗೆ ಅಪ್ಪಳಿಸಿ, ರಸ್ತೆಯಲ್ಲಿದ್ದ ವಾಹನಗಳಿಗೆ ಡಿಕ್ಕಿಹೊಡೆದಿತ್ತು. ದೃಶ್ಯ ನಿಜಕ್ಕೂ ಭೀಕರವಾಗಿತ್ತು. ಆದರೆ ಯಾರ ಪ್ರಾಣಕ್ಕೂ ಅಪಾಯವಾಗದಿರುವುದು ಪವಾಡವೇ ಸರಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. (ಎಂ.ಎನ್)

Leave a Reply

comments

Related Articles

error: