ಕ್ರೀಡೆಮನರಂಜನೆ

ಅರುಣ್ ಜೇಟ್ಲಿ ಸ್ಟೇಡಿಯಮ್ ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ತಂದೆಯ ಸಾವಿನ ಬಗ್ಗೆ ಕೇಳಿ ಭಾವುಕರಾದ ಅನುಷ್ಕಾ ಶರ್ಮಾ 

ದೇಶ(ನವದೆಹಲಿ)ಸೆ.13:- ನವದೆಹಲಿಯಲ್ಲಿನ  ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣಕ್ಕೆ ಡಿಡಿಸಿಎ ಮಾಜಿ ಅಧ್ಯಕ್ಷ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ಇಡಲಾಗಿದೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಅನೇಕ ಕ್ರಿಕೆಟಿಗರೊಂದಿಗೆ ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ವಿರಾಟ್ ಅವರ ತಂದೆ ಸಾವನ್ನಪ್ಪಿದ ವಿಷಯವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ವಿರಾಟ್ ಅವರ ತಂದೆಯ ಮರಣದ ನಂತರ ಅರುಣ್ ಜೇಟ್ಲಿ ವಿರಾಟ್ ಅವರ ಮನೆಗೆ ತಲುಪಿದ್ದರು.  ಆ ಸಮಯದಲ್ಲಿ, ವಿರಾಟ್ 19 ವರ್ಷದೊಳಗಿನವರ ತಂಡದಲ್ಲಿದ್ದರಲ್ಲದೇ ಅವರು ಪಂದ್ಯವನ್ನು ಆಡಬೇಕಾಗಿತ್ತು. ಆ ಸಮಯದಲ್ಲಿ ದೇಶಕ್ಕಾಗಿ ಆಡುವ ಅವಶ್ಯಕತೆಯಿದೆ ಎಂದು ವಿರಾಟ್ ಭಾವಿಸಿದ್ದರು. ಈ ಕುರಿತು  ಅರುಣ್ ಜೇಟ್ಲಿ ಯವರಿಗೆ ತಿಳಿದಾಗ  ಅವರು ವಿರಾಟ್ ಅವರನ್ನು ಹೊಗಳಿದರು. ವಿರಾಟ್ ಅವರು ದೊಡ್ಡ ಹೆಸರನ್ನು ಮಾಡುತ್ತಾರೆ ಮತ್ತು ಕ್ರಿಕೆಟ್ ಇತಿಹಾಸದಲ್ಲಿ ಅವರಿಗಿಂತ ಬಲಿಷ್ಠರು ಇರುವುದಿಲ್ಲ ಎಂದು ಹೇಳಿದ್ದರಂತೆ.

ಈ ಸಂದರ್ಭವನ್ನು ಸ್ಮರಿಸಿದ ವೀಡಿಯೊ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅನುಷ್ಕಾ ತುಂಬಾ ಭಾವುಕರಾಗಿದ್ದು, ವಿರಾಟ್ ಕೈಯನ್ನು ಹಿಡಿದಿದ್ದಾರೆ, ಇದೇ ವೇಳೆ ಅನುಷ್ಕಾ ವಿರಾಟ್ ಕೈಗೆ ಸಿಹಿ ಮುತ್ತೊಂದನ್ನು ನೀಡಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: