ಪ್ರಮುಖ ಸುದ್ದಿಮೈಸೂರು

ಡಿ.ಕೆ.ಶಿ ವಿರುದ್ಧ ಪಿಸಿ ಆಕ್ಟ್ ಅಡಿ ದೂರು ದಾಖಲಿಸಿ ಎಸ್.ಆರ್.ಹಿರೇಮಠ ಒತ್ತಾಯ

ಪ್ರಕರಣಗಳು ಭ್ರಷ್ಠರಿಗೆ ಪಾಠವಾಗಲಿ

ಮೈಸೂರು,ಸೆ.13 : ಅಕ್ರಮ ಹಣ ಹಾಗೂ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ಬಂಧಿಯಾಗಿರುವ ಮಾಜಿ ಸಚಿವ ಡಿ.ಕೆ‌.ಶಿವಕುಮಾರ್ ವಿರುದ್ಧ ಪಿಸಿ ಆಕ್ಟ್ ಅಡಿ ದೂರು ದಾಖಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ಹೋರಾಟಗಾರ ಹಾಗೂ ಸಿಟಿಜನ್ ಫಾರ್ ಡೆಮಾಕ್ರಿಸಿ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಸಿಬಿಐ ಗೆ ಮನವಿ ಮಾಡಿದರು.

ಕಳೆದ ನಾಲ್ಕು ವರ್ಷಗಳಲ್ಲಿ  ನೂರು ಪಟ್ಟು ‌ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಡಿಕೆಶಿ ಸಂಪತ್ತಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗಿರುವ ಪೈಸೆ ಪೈಸೆಯನ್ನು ವಶಪಡಿಸಿಕೊಳ್ಳಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ ಅವರು, ಡಿ.ಕೆ.ಶಿ ಅವರ ಅಕ್ರಮ ಆದಾಯ ಹಾಗೂ ಆಸ್ತಿಗೆ ಸಂಬಂಧಿಸಿದಂತೆ 191 ಪುಟಗಳ 30ಅನುಬಂಧಗಳನ್ನೊಳಗೊಂಡ  ಸುಧೀರ್ಘ ಪತ್ರವನ್ನು ಪ್ರಧಾನ ಮಂತ್ರಿ, ಸಿಬಿಐ ಹಾಗೂ ಲೋಕಪಾಲ್ ಬರೆಯಲಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿರುವರು.

ಪತ್ರದಲ್ಲಿ ಮೈಸೂರು ಮಿನರಲ್ ನಿಂದ  10.8ಲಕ್ಷ ಎಂಟಿಎಸ್ ಉತ್ಕೃಷ್ಟ ಗುಣಮಟ್ಟದ ಕಬ್ಬಿಣ ಅದಿರು ಲೂಟಿ.  ಡಿ.ಕೆ.ಶಿ ಹಾಗೂ ಸುರೇಶ ಕುಟುಂಬ ಸದಸ್ಯರನ್ನೊಳಗೊಂಡ 8 ಕಂಪನಿಗಳ ಮೂಲಕ ಹೌಸಿಂಗ್ ಬಿಲ್ಡಿಂಗ್ ಕೋ.ಅಪರೇಟಿವ್ ಹೆಸರಿನಲ್ಲಿ ರೂ.3 ಲಕ್ಷ ಕೋಟಿ ಹಗರಣಹಾಗೂ ಚನ್ನಗಾನಹಳ್ಳಿಯ 4.ಎ.30 ಗುಂಟೆ ಭೂಮಿ  ಸೇರಿದಂತೆ ಪ್ರಮುಖ ಮೂರು ಪ್ರಮುಖ ಪ್ರಕರಣಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಸಾಕ್ಷಿ ಸಮೇತ ಕಳಿಸಲಾಗಿದ್ದು ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳುವ ಮೂಲಕ ಭ್ರಷ್ಟರನ್ನು ಮಟ್ಟಹಾಕಬೇಕೆಂದು ತಿಳಿಸಿದರು.

ಡಿನೋಟೀಪಿಕೇಷನ್‌. ಅಕ್ರಮ ಹಣ‌ಲೂಟಿ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಿ.ಕೆ.ಶಿವಕುಮಾರ್ ಇವರುಗಳು ರಾಜ್ಯ ಲೂಟಿ ಮಾಡಿದ್ದು, ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವುದನ್ನು ತೀವ್ರ ತರಾಟೆ ತೆಗೆದುಕೊಂಡು ಪಕ್ಷಪಾತವಿಲ್ಲದೆ ಸೂಕ್ತ ತನಿಖೆ ನಡೆಸಿ .ನಡೆಸಬೇಕಿದ್ದು ಈ ಪ್ರಕರಣ ಭ್ರಷ್ಟ ರಿಗೆಲ್ಲ ಎಚ್ಚರಿಕೆ ಗಂಟೆಯಾಗಬೇಕಿದೆ ಎಂದು ಆಶಿಸಿದರು.

ಉತ್ತರ ಕರ್ನಾಟಕ ಬಹುಭಾಗ ನೆರೆ ಹಾವಳಿಗೆ ತುತ್ತಾಗಿದ್ದು, ಬೀದಿಗೆ ಬಿದಿರುವ ಸಂತ್ರಸ್ತರಿಗೆ ಸೂಕ್ತ ರೀತಿ ಪರಿಹಾರವನ್ನು ಒದಗಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಜನ ಸಂಗ್ರಾಮ ಪರಿಷತ್ ಪ್ರಸನ್ನ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: