ಪ್ರಮುಖ ಸುದ್ದಿಮೈಸೂರು

ಸೆ.15ರಂದು ಜೆಟ್ಟಿಹುಂಡಿ -ಚರಿತ್ರೆಯ ಹೆಜ್ಜೆಗಳು ಪುಸ್ತಕ ಬಿಡುಗಡೆ

ಮೈಸೂರು. ಸೆ.13: ಬಸವರಾಜು ಸಿ ಜೆಟ್ಟಿಹುಂಡಿ ಅವರ ‘ಜೆಟ್ಟಿಹುಂಡಿ : ಚರಿತ್ರೆಯ ಹೆಜ್ಜೆಗಳು ಪುಸ್ತಕವನ್ನು ಮಾಜಿ ಮುಖ್ಯ ಮಂತ್ರಿ ಸಿದ್ಸರಾಮಯ್ಯನವರು ಬಿಡುಗಡೆಗೊಳಿಸಲಿದ್ದಾರೆ.
ಜಯಚಂದ್ರ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ‌ವಿವರ ನೀಡಿ, ಸೆ.15 ರ ಸಂಜೆ 5 ಗಂಟೆಗೆ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪುರ ಅಧ್ಯಕ್ಷತೆ ವಹಿಸಲಿದ್ದಾರೆ. ಮೈವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್. ಕುಲಸಚಿವ ಡಾ.ಆರ್.ಶಿವಣ್ಣ. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌, ಚಿಂತಕ ಕಾ.ತ.ಚಿಕ್ಕಣ್ಣ. ಪ್ರೊ.ಎನ್.ಎಂ.ತಳವಾರ ಹಾಗೂ ಇತರರು ಹಾಜರಿರುವರು ಎಂದು ತಿಳಿಸಿದರು.
ಜೆಟ್ಟಿಗಳ ಹಾಗೂ ಮೈಸೂರು ಅಎಮನೆಗೂ ಇರುವ ಸಂಬಂಧದ ಬಗ್ಗೆ ಮೂಡಿರುವ ಈ ಪುಸ್ತಕವು ನಾಡ ಹಬ್ಬ ದಸರಾ ಈ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಪುಟ್ಟರಾಜ್. ಕೆ‌.ಪಿ.ಚಿಕ್ಕಸ್ವಾಮಿ, ಕುರುಬರಳ್ಳಿ ಹೇಮಂತ್. ನಾಗೇಶ್ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: