ಮೈಸೂರು

ಜಂಬೂ ಸವಾರಿ ಕ್ಯಾಪ್ಟನ್ ಅರ್ಜುನ ಸಮ್ಮುಖ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರಿಂದ ಮದ್ದುಗುಂಡು ಸಿಡಿಸುವ ತಾಲೀಮು

ಮೈಸೂರು,ಸೆ.13:- ಮೈಸೂರು ಅರಮನೆ ಪಾರ್ಕಿಂಗ್ ಸ್ಥಳದಲ್ಲಿ  ಇಂದು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಂಡಾನೆ ಅರ್ಜುನ ಸಮ್ಮುಖ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರು ಫಿರಂಗಿಯಿಂದ ಮದ್ದುಗುಂಡು ಸಿಡಿಸುವ ತಾಲೀಮು ನಡೆಸಿದರು.

11ಆನೆಗಳು ಮತ್ತು 21 ಅಶ್ವಗಳು ಅವುಗಳೂ ಕೂಡ ತಾಲೀಮಿನಲ್ಲಿ  ಭಾಗವಹಿಸಿದ್ದವು. ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿದ್ದು  ಆನೆಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಆಶ್ವಗಳು ಭಾಗವಹಿಸಲಿವೆ. ಪೊಲೀಸ್ ಆಧಿಕಾರಿಗಳು ಮೂರು ಸುತ್ತು  ಫಿರಂಗಿ ಸಿಡಿಸಿದರು.  ಮೊದಲನೇ ಸುತ್ತಿನಲ್ಲಿ ಆನೆಗಳು ಬೆಚ್ಚಿ ಬಿದ್ದಿದ್ದವು. ಬಳಿಕ ಸೊಂಡಿಲಾಡಿಸುತ್ತ ನಿಂತಿದ್ದವು. ಆದರೆ ಮೂರು ಸುತ್ತುಗಳಲ್ಲಿಯೂ ಅಶ್ವಗಳು ಬೆಚ್ಚಿ ಬಿದ್ದಿವೆ. ಆನೆಗಳು ಮತ್ತು ಕುದುರೆಗಳು ಫಿರಂಗಿಯಿಂದ ಹೊರಬರುವ ಭಾರೀ ಸದ್ದಿಗೆ  ಭಯಗೊಳ್ಳದೇ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದೇ ತಾಲೀಮಿನ ಉದ್ದೇಶವಾಗಿದ್ದು, ಜಂಬೂ ಸವಾರಿಯ ವೇಳೆ ವಿಚಲಿತರಾಗದೇ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಪೂರ್ವಭಾವಿಯಾಗಿ ತಾಲೀಮು ನಡೆಸಲಾಯಿತು.

ಈ ಸಂದರ್ಭ ಪೊಲೀಸ್ ನಗರ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್, ಎಸಿಪಿ ಜಿ.ಎನ್.ಮೋಹನ್, ಅರಮನೆಯ ಪೊಲೀಸ್ ಸಿಬ್ಬಂದಿಗಳು ಹಾಗೂ ಅರಣ್ಯಾಧಿಕಾರಿ  ಮತ್ತಿತರರು ಉಪಸ್ಥಿತರಿದ್ದರು (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: