ಪ್ರಮುಖ ಸುದ್ದಿ

ಹೆಚ್ಚಿದೆ ಪ್ರಧಾನಿ ಮೋದಿ ಧ್ಯಾನಕ್ಕೆ ಕುಳಿತ ಕೇದಾರನಾಥ ಗುಹೆಯ ಕ್ರೇಜ್ : ಅಕ್ಟೋಬರ್ ವರೆಗೆ ಫುಲ್ ಬುಕಿಂಗ್  

ದೇಶ(ನವದೆಹಲಿ)ಸೆ.13:-   ಲೋಕಸಭಾ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥದ ಗುಹೆಯೊಂದರಲ್ಲಿ ಧ್ಯಾನ ಮಾಡಿದ್ದರು. ಅಂದಿನಿಂದ, ಈ ಗುಹೆ ವಿಶ್ವಾದ್ಯಂತ ಗಮನ ಸೆಳೆದಿದೆ. ಈ ಗುಹೆಯನ್ನು ನೋಡಲು ಮತ್ತು ಅದರಲ್ಲಿ ಸಮಯ ಕಳೆಯಲು ಜನರಲ್ಲಿ   ಆಸಕ್ತಿ ಹೆಚ್ಚುತ್ತಿದೆ.  ಇಂದಿನಿಂದ ಅಕ್ಟೋಬರ್ ವರೆಗಿನ ಬುಕಿಂಗ್ ಪೂರ್ಣಗೊಂಡಿದೆ. ಈ ಗುಹೆ ಕೇದಾರನಾಥಕ್ಕೆ ಭೇಟಿ ನೀಡುವ ಜನರಿಗೆ ವಿಶೇಷ ಪ್ರವಾಸಿ ತಾಣವಾಗಿದೆ.

ಕೇದಾರನಾಥ ಧಾಮಕ್ಕೆ ಭೇಟಿ ನೀಡಿದ ನಂತರ ಮೇ 18 ರಂದು ಪ್ರಧಾನಿ ಮೋದಿ ಈ ಗುಹೆಯಲ್ಲಿ ಧ್ಯಾನ ಮಾಡಿದ್ದರು. ಈ ಸಮಯದಲ್ಲಿ  ಪ್ರಧಾನಿ ಇಡೀ ರಾತ್ರಿ ಈ ಗುಹೆಯಲ್ಲಿ ಕಳೆದಿದ್ದರು. ಅಂದಿನಿಂದ, ಗುಹೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ಕಳೆದ 65 ದಿನಗಳಲ್ಲಿ ಹೈದರಾಬಾದ್, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಇತರ ರಾಜ್ಯಗಳ 46 ಭಕ್ತರು ಆಧ್ಯಾತ್ಮಿಕ ಅಭ್ಯಾಸ ಮತ್ತು ಯೋಗ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಗುಹೆಯ ಎತ್ತರವು ಸಮುದ್ರ ಮಟ್ಟಕ್ಕಿಂತ 12 ಸಾವಿರ ಅಡಿಗಳಿಗಿಂತ ಹೆಚ್ಚಿದೆ. ಈ ಗುಹೆಯಲ್ಲಿ ವೈ-ಫೈ, ಫೋನ್ ಜೊತೆಗೆ ಹಾಸಿಗೆಗಳೂ ಇವೆ. (ಎಸ್.ಎಚ್)

Leave a Reply

comments

Related Articles

error: