ಪ್ರಮುಖ ಸುದ್ದಿ

ಜೋರಾಗಿ ನಕ್ಕೀರಿ ಜೋಕೆ ; ಜೋರಾಗಿ ನಕ್ಕ ಮಹಿಳೆಗೆ ಬಾಯಿ ಮುಚ್ಚಲಾಗಿಲ್ಲ : ವೈದ್ಯರು ಕೂಡ ಹೈರಾಣು

ದೇಶ(ನವದೆಹಲಿ)ಸೆ.13:- ಜೋರಾಗಿ ನಕ್ಕೀರಿ ಜೋಕೆ. ನಗು ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇಲ್ಲಿನ ಮಹಿಳೆಯೋರ್ವರಿಗೆ ಮಾತ್ರ ಈ ಮಾತು  ಸರಿ ಹೊಂದುವುದಿಲ್ಲ. ಯಾಕೆಂದರೆ  ಜೋರಾಗಿ ನಕ್ಕ ನಂತರ ಅವರ ಬಾಯಿ ತೆರೆದೆ ಇತ್ತು ಎನ್ನಲಾಗಿದ್ದು, ವೈದ್ಯರೂ ಕೂಡ ಒಂದು ಕ್ಷಣ ಹೈರಾಣಾಗಿದ್ದರಂತೆ.

ಚೀನಾದ ಗುರ್ ಗಾಂವ್ ನ  ದಕ್ಷಿಣ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲಿನಲ್ಲಿ ಬರೆದಿದ್ದ ವಾಕ್ಯವೊಂದನ್ನು ನೋಡಿ ಮಹಿಳೆ ಜೋರಾಗಿ ನಕ್ಕಿದ್ದು ದವಡೆ ಒಂದು ಕಡೆಯಿಂದ ಅಲುಗಾಡಿದೆ ಎನ್ನಲಾಗಿದ್ದು, ತೆರೆದ ಬಾಯಿ ತೆರೆದೇ ಇತ್ತು ಎನ್ನಲಾಗಿದೆ.

ಮಹಿಳೆಯ ಅದೃಷ್ಟ ಚೆನ್ನಾಗಿತ್ತು ಎನ್ನಲಾಗಿದ್ದು, ಮಹಿಳೆ ಪ್ರಯಾಣಿಸುತ್ತಿದ್ದ ರೈಲ್ವೆಯಲ್ಲಿಯೇ ವೈದ್ಯರೊಬ್ಬರಿದ್ದು ಅವರು ಮಹಿಳೆಯ ಸಹಾಯಕ್ಕೆ ಬಂದರಂತೆ. ನಾನು ಯಾವಾಗ ಮಹಿಳೆಯ ಬಳಿ ತಲುಪಿದೆನೋ ಆಗ ಮಹಿಳೆಯ ಬಾಯಿ ತೆರೆದೇ ಇತ್ತು. ಅವರು ಮಾತನಾಡಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ. ಬಾಯಿ ಮುಚ್ಚಲೂ ಸಾಧ್ಯವಾಗುತ್ತಿರಲಿಲ್ಲ. ಅವರ ಬಾಯಿಂದ ಎಂಜಲು ಸುರಿಯುತ್ತಿತ್ತು. ನಾನು ಆಕೆಗೆ ಹೃದಯಾಘಾತವಾಗಿರಬೇಕೆಂದುಕೊಂಡೆ.  ನಂತರ ನಾನು ಅವರ ರಕ್ತದೊತ್ತಡ ಪರೀಕ್ಷಿಸಿದೆ. ಕೆಲವು ಪ್ರಶ್ನೆಗಳನ್ನು ಕೇಳಿದೆ. ಆಗ ಅವರ ದವಡೆ ಇದ್ದ ಸ್ಥಳದಿಂದ ಅಲ್ಲಾಡಿದೆ ಎಂದು ನನಗೆ ಅರ್ಥವಾಯಿತು.   ಸ್ವಲ್ಪ ಪ್ರಯತ್ನದ ನಂತರ ಅವರ ದವಡೆಯನ್ನು ಸರಿಪಡಿಸಿದೆ.ನಂತರ ಅವಳು ಬಾಯಿ ಮುಚ್ಚಲು ಸಾಧ್ಯವಾಯಿತು. ನನಗೆ ಹಿಂದೊಮ್ಮೆ ಹೀಗೆ ಆಗಿತ್ತು ಎಂದಿದ್ದಾರಂತೆ ಮಹಿಳೆ. (ಎಸ್.ಎಚ್)

Leave a Reply

comments

Related Articles

error: