ಸುದ್ದಿ ಸಂಕ್ಷಿಪ್ತ

ಸೆ.15 ರಂದು ಕೃತಿಗಳ ಲೋಕಾರ್ಪಣೆ ಸಮಾರಂಭ

ಮೈಸೂರು,ಸೆ.13-ಸಂವಹನ ವತಿಯಿಂದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ಸಿ.ಚಾಮಶೆಟ್ಟಿ ಅವರ `ಆರು ನಾಟಕಗಳು’, `ಶಿವಭಕ್ತ ಕೇಶಿರಾಜ ಮತ್ತು ಕೋಳೂರು ಕೊಡಗೂಸು’ ಮತ್ತು `ಕ್ರೀಡಾಸಿರಿ ಮತ್ತು ಜ್ಞಾನಸಿರಿ’ ಕವನ ಸಂಕಲನದ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಸೆ.15 ರಂದು ಬೆಳಿಗ್ಗೆ 11 ಗಂಟೆಗೆ ಸಿದ್ಧಾರ್ಥನಗರದ ನಂ. 116 ಪಿ.ಎಚ್.ಆರ್. ಶೆಟ್ಟರ ಮನೆ ಆವರಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಉದ್ಘಾಟಿಸಲಿದ್ದಾರೆ. ಕೃತಿಯನ್ನು ಸಾಹಿತಿ ಮತ್ತು ರಂಗಕರ್ಮಿ ಡಾ.ಎಚ್.ಎ.ಪಾರ್ಶ್ವನಾಥ್ ಕೃತಿಗಳ ಲೋಕಾರ್ಪಣೆ ಮಾಡಲಿದ್ದಾರೆ. ಆರು ನಾಟಕಗಳ ಕುರಿತು ಸಾಹಿತಿ, ರಂಗಕಲಾವಿದೆ ಡಾ.ಪದ್ಮಿನಿ ನಾಗರಾಜು ಮಾತನಾಡಲಿದ್ದಾರೆ. (ಎಂ.ಎನ್)

Leave a Reply

comments

Related Articles

error: