ದೇಶಪ್ರಮುಖ ಸುದ್ದಿ

ನಿರ್ಣಾಯಕ ಪರೀಕ್ಷೆಯಲ್ಲಿ ಯಶಸ್ವಿಯಾದ ‘ತೇಜಸ್‌’ ಯುದ್ಧ ವಿಮಾನ

ನವದೆಹಲಿ,ಸೆ.13-ದೇಶೀಯ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್‌’ ನಿಗದಿತ ಸ್ಥಳದಲ್ಲಿ ನಿಯಂತ್ರಿತ ಇಳಿಸುವಿಕೆ (ಅರೆಸ್ಟೆಡ್‌ ಲ್ಯಾಂಡಿಂಗ್‌) ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ನೌಕಾ ಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲಿರುವ ತೇಜಸ್‌ ಪ್ರಮುಖ ಹಂತವನ್ನು ಪೂರೈಸಿದಂತಾಗಿದೆ.

ಗೋವಾದ ಪರೀಕ್ಷಾ ಕೇಂದ್ರದಲ್ಲಿ ಇಂದು ಹಡಗು ಕಟ್ಟೆಯಲ್ಲಿರುವಂತೆ ಕಿರಿದಾದ ಜಾಗದಲ್ಲಿ ವೇಗವಾಗಿ ಹಾರಿ ಬಂದ ತೇಜಸ್‌ ಸುರಕ್ಷಿತವಾಗಿ ಇಳಿದು ನಿಂತಿತು. ಆ ಮೂಲಕ ಈ ಪರೀಕ್ಷೆಯಲ್ಲಿ ಯಶಸ್ವಿಯಾದ ದೇಶದ ಮೊದಲ ಯುದ್ಧ ವಿಮಾನ ಎಂಬ ಹೆಗ್ಗಳಿಕೆಗೆ ತೇಜಸ್‌ ಪಾತ್ರವಾಗಿದೆ.

ವೇಗವಾಗಿ ಹಾರಾಟ ನಡೆಸುವ ಯುದ್ಧ ವಿಮಾನ ಅತ್ಯಂತ ಕಡಿಮೆ ಅಂತರದಲ್ಲಿ ಸುರಕ್ಷಿತವಾಗಿ ಇಳಿಯುವ ಸಾಮರ್ಥ್ಯ ಪರೀಕ್ಷೆ ಇದಾಗಿತ್ತು. ಯುದ್ಧ ನೌಕೆಯಿಂದ ಹಾರುವ ಯುದ್ಧ ವಿಮಾನ ಕಾರ್ಯಾಚರಣೆಯ ಬಳಿಕ ನೌಕೆಯ ನಿಗದಿತ ಸ್ಥಳದಲ್ಲಿ ಇಳಿಯಬೇಕು.

ಅಮೆರಿಕಾ, ರಷ್ಯಾ, ಯುಕೆ, ಫ್ರಾನ್ಸ್‌ ಹಾಗೂ ಇತ್ತೀಚೆಗೆ ಚೀನಾದ ಕೆಲವೇ ಯುದ್ಧ ವಿಮಾನಗಳು ಮಾತ್ರ ನಿರ್ಬಂಧಿತ ಇಳಿಯುವಿಕೆಯಲ್ಲಿ ಯಶಸ್ವಿಯಾಗಿವೆ.  (ಎಂ.ಎನ್)

 

Leave a Reply

comments

Related Articles

error: