ಸುದ್ದಿ ಸಂಕ್ಷಿಪ್ತ

ವಿಪ್ರ 5ನೇ ವಾರ್ಷಿಕೋತ್ಸವ : ಪ್ರತಿಭಾ ಪುರಸ್ಕಾರ

ಮೈಸೂರು,ಸೆ.13 : ವಿಪ್ರ ಜಾಗೃತಿ ವೇದಿಕೆಯ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರವನ್ನು ಜೆಪಿ ನಗರದ ಮಹರ್ಷಿ ಶಾಲೆಯಲ್ಲಿ ಸೆ.15ರ ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.

ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ, ಶಾಸಕ ಎಸ್.ಎ.ರಾಮದಾಸ್ ಉದ್ಘಾಟನೆ, ವೇದಿಕೆ ಅಧ್ಯಕ್ಷ ಜೆ.ರಮೇಶ್ ಅಧ್ಯಕ್ಷತೆ. ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಸ್ಮರಣ ಸಂಚಿಕೆ ಬಿಡುಗಡೆ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಪ್ರತಿಭಾ ಪುರಸ್ಕಾರ ವಿತರಣೆ ಮಾಡುವರು, ರಘುರಾಂ ವಾಜಪೇಯಿ, ಡಾ.ಭವಾನಿ ಶಂಕರ್, ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಇರುವರು. ಡಾ.ಭಾನುಪ್ರಕಾಶ್ ಶರ್ಮ ಅಶೀರ್ವಚನ ನೀಡಲಿದ್ದು, ಸಮಾಜ ಹಲವು ಗಣ್ಯರು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: