ಸುದ್ದಿ ಸಂಕ್ಷಿಪ್ತ

ಸೆ.16ರಿಂದ ಭೂಸ್ವಾಧೀನ ವಿರೋಧಿಸಿ ಅನಿರ್ಧಿಷ್ಟಾವದಿ ಧರಣಿ

ಮೈಸೂರು,ಸೆ.13 : ಫಲವತ್ತಾತದ ರೈತ ಜಮೀನನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಸೆ.16ರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನಾ ಮೈಸೂರು,ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲಾ ಘಟಕಗಳು, ಬಲ್ಲಹಳ್ಳಿ ಉಳಿಸಿ ಹೋರಾಟ ಸಮಿತಿಯಿಂದ ಮುಡಾ ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಗ್ರಾಮದ ಸುತ್ತಮುತ್ತಲಿನ ರಾಮನಹುಂಡಿ, ಬೀರಿಹುಂಡಿ, ಕೆ.ಸಾಲುಂಡಿ, ಗೋವಳ್ಳಿ, ಕುಮಾರಬೀಡು, ಬಡಗಲಹುಂಡಿ, ಮರಟಿಕ್ಯಾತನಹಳ್ಳಿ ಇತರ ಪ್ರದೇಶಗಳ ಫಲವತ್ತಾದ ಜಮೀನುಗಳನ್ನು ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಅತಿಕ್ರಮಣ ಮಾಡಲು ಹೊರಟ್ಟಿದ್ದು ಇದನ್ನು ಖಂಡಿಸಿ ಸೆ.16 ರಿಂದ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸಲಾಗುವುದು ಎಂದು ಮಹದೇವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: