ಸುದ್ದಿ ಸಂಕ್ಷಿಪ್ತ

ಚಾತುರ್ಮಾಸ್ಯ ಸಮಾರೋಪ ನಾಳೆ

ಮೈಸೂರು.ಸೆ.13 : ಶ್ರೀಕೃಷ್ಣ ಟ್ರಸ್ಟ್ ವತಿಯಿಂದ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳ 81ನೇ ಹಾಗೂ ಶ್ರೀ ವಿಶ್ವ ಪ್ರಸನ್ನ ತೀರ್ಥರ 32ನೇ ಚಾತುರ್ಮಾಸ್ಯ ವೃತದ ಸಮಾರೋಪ ಸಮಾರಂಭವು ಸೆ.14ರ ಸಂಜೆ 6 ಗಂಟೆಗೆ ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಏರ್ಪಡಿಸಲಾಗಿದೆ.

ವಿಧಾನ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಗಳಾಗಿರುವರು. ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ಆದ್ಯಪಾಡಿ ಹರಿದಾಸ್ ಭಟ್ ಇರುವರು.  ಇದಕ್ಕೂ ಮುನ್ನಾ ವಿದುಷಿ ಅಂಜಲಿ ಶ್ರೀರಾಮ್ ಸಂಗೀತ ಕಛೇರಿ ನಡೆಸಲಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: