ಸುದ್ದಿ ಸಂಕ್ಷಿಪ್ತ

ಸರ್.ಎಂ.ವಿಶ‍್ವೇಶ್ವರಯ್ಯನವರ 158ನೇ ಜಯಂತಿ ನಾಳೆ

ಮೈಸೂರು,ಸೆ.13 : ಪ್ರಜ್ಞಾವಂತ ನಾಗರೀಕ ವೇದಿಕೆ ವತಿಯಿಂದ ಭಾರತರತ್ನ ಸರ್. ಎಂ.ವಿಶ್ವೇಶ್ವರಯ್ಯ 158ನೇ ಜಯಂತಿ ಅಂಗವಾಗಿ ವಿಶ್ವ ಕಂಡ ವಿಶ್ವೇಶ್ವರಯ್ಯ ವಿಚಾರ ಮಂಥನವನ್ನು ಸೆ.14ರ ಬೆಳಗ್ಗೆ 10.30ಕ್ಕೆ ವಿಶ್ವೇಶ್ವರ ನಗರದ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಆರ್.ಐ.ಟಿ ವಿದ್ಯಾಸಂಸ್ಥೆಯ ವೆಂಕಟೇಶ್, ಜಿ.ಎಸ್.ಎಸ್. ಫೌಂಡೇಷನ್ ಸಂಸ್ಥಾಪಕ ಶ್ರೀಹರಿ, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಇತರರು ಹಾಜರಿರಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: