ದೇಶಪ್ರಮುಖ ಸುದ್ದಿ

ಕೊನೆಗೂ ಬಲೆಗೆ ಬಿದ್ದ ಶಂಕಿತರು: ಮುಂಬೈ ಪೊಲೀಸರಿಂದ 3 ದಿನ ನಡೆದ ಕಾರ್ಯಾಚರಣೆ

ಉರಾನ್ ನಲ್ಲಿ ಕಾಣಿಸಿಕೊಂಡಿದ್ದ ಮೂವರು ಶಂಕಿತರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗೃಹ್ವಾನ್ ಗ್ರಾಮದಲ್ಲಿ ಈ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಇಳಿಸಿವೆ.

ಗುರುವಾರದಂದು ಉರಾನ್ ನೌಕಾ ನೆಲೆ ಬಳಿ ನಾಲ್ವರು ಅಪರಿಚಿತರು ಶಸ್ತ್ರಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದರು ಎಂದು ಉರಾನ್ ಎಜುಕೇಶನ್ ಸೊಸೈಟಿಯ ಇಬ್ಬರು ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ತನಿಖಾ ಕ್ರಮ ಕೈಗೊಳ್ಳಲಾಗಿತ್ತು. ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಈ ಚಿತ್ರಗಳನ್ನು ನಗರದ ಎಲ್ಲ ಪೊಲೀಸ್ ಠಾಣೆಗೂ ಕಳುಹಿಸಲಾಗಿತ್ತು. ಅಲ್ಲದೆ, ಮುಂಬೈ ನಗರದೆಲ್ಲೆಡೆ ಹೈಅಲರ್ಟ್ ಕೂಡ ಘೋಷಿಸಲಾಗಿತ್ತು.

Leave a Reply

comments

Tags

Related Articles

error: