ಮೈಸೂರು

ಕಾರಿನ ಮೇಲೆ ಬಿದ್ದ ಹಲ್ಲಿ : ಗಾಬರಿಗೊಂಡು ಮರಕ್ಕೆ ಕಾರು ಗುದ್ದಿದ ಚಾಲಕ; ಕಾರು ಜಖಂ

ಮೈಸೂರು,ಸೆ.14:-  ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕಾರಿನ ಮುಂದಿನ ಗ್ಲಾಸ್ ಮೇಲೆ  ಮರದ ಮೇಲಿಂದ ಹಲ್ಲಿ ಬಿದ್ದಿದ್ದಕ್ಕೆ ಗಾಬರಿಗೊಂಡ ಕಾರು ಚಾಲಕನೋರ್ವ ಕಾರನ್ನು ಮರಕ್ಕೆ ಗುದ್ದಿದ ಪರಿಣಾಮ ಕಾರು ಜಖಂಗೊಂಡ ಘಟನೆ ಜೆ.ಪಿ.ನಗರ ಕರ್ನಾಟಕ ಬ್ಯಾಂಕ್ ಎದುರು ನಡೆದಿದೆ.

ಸ್ಟರ್ಲಿಂಗ್ ಚಿತ್ರಮಂದಿರ ಕಡೆಯಿಂದ ಜೆ.ಪಿ.ನಗರ ಕಡೆ ಹೋಗುತ್ತಿದ್ದ ಕಾರಿನ ಮೇಲೆ ಹಲ್ಲಿಯೊಂದು ಬಿದ್ದಿದ್ದು, ತಕ್ಷಣಕ್ಕೆ ಗಾಬರಿಯಾದ ಕಾರು ಚಾಲಕ ಕಾರನ್ನು ಸಡನ್ನಾಗಿ ಎಡಗಡೆಗೆ ತಿರುಗಿಸಿದ್ದು, ಇದರಿಂದ ಕಾರು ಎದುರಿದ್ದ ಮರಕ್ಕೆ ಗುದ್ದಿದೆ. ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರನ್ನು ಬಲಗಡೆಗೆ ತಿರುಗಿಸಿದ್ದಲ್ಲಿ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.

ಕಾರು ಚಾಲಕ ಭಯಭೀತನಾಗಿ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಕೆ.ಆರ್.ಠಾಣೆಯ ಸಂಚಾರಿ ಪೊಲೀಸರು ಕಾರನ್ನು ಠಾಣೆಗೆ ತಂದು ನಿಲ್ಲಿಸಿದ್ದಾರೆ. ಕಾರು ಚಾಲಕ ಯಾರು? ಎಲ್ಲಿಗೆ ಹೊರಟಿದ್ದ ಎಂಬಿತ್ಯಾದಿ  ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: