ಮೈಸೂರು

ಸೆಷನ್ಸ್ ನ್ಯಾಯಾಲಯದಲ್ಲಿ ಮಾದೇಶ್ ಬೆಂಬಲಿಗರಿಂದ ಅಸಭ್ಯ ವರ್ತನೆ

ಮೈಸೂರಿನಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾದೇಶ್ ಮತ್ತವನ ಸಹಚರರನ್ನು ಬುಧವಾರ ಮೈಸೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಈ ಸಂದರ್ಭ ಇನ್ಸಪೆಕ್ಟರ್ ಓರ್ವರನ್ನು ಮಾದೇಶ್ ಬೆಂಬಲಿಗರು ಅವಾಚ್ಯ ಸಂಬಂಧಗಳಿಂದ ನಿಂದಿಸಿದ್ದಲ್ಲದೇ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ.

ಬಳ್ಳಾರಿ ಜೈಲಿನಲ್ಲಿ  ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾದೇಶ್ ಮತ್ತವರ ಸಹಚರರಾದ ಮಂಜು, ಚಂದ್ರ, ಕಾಳ ಮತ್ತಿತರರನ್ನು ಬುಧವಾರ ಮೈಸೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ  ವಿಚಾರಣೆಗಾಗಿ ಕರೆತರಲಾಗಿತ್ತು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯದ ಆವರಣ ಬಿಟ್ಟು ತೆರಳುವ ಮಾರ್ಗದಲ್ಲಿ  ಮಾದೇಶ್ ಬೆಂಬಲಿಗರು ಮಾದೇಶ್ ನನ್ನು ಸುತ್ತುವರಿದು ಮಾತನಾಡಿಸಲು ಮುಂದಾದಾಗ ಅಲ್ಲೇ ಇದ್ದಂತಹ ಇನ್ಸಪೆಕ್ಟರ್ ಸಿದ್ದರಾಜು ಅವರನ್ನು ತಡೆದಿದ್ದಾರೆ. ಅವರು ತಡೆದರು ಎಂಬ ಒಂದೇ ಕಾರಣಕ್ಕೆ ಇನ್ಸಪೆಕ್ಟರ್ ಸಿದ್ದರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಇನ್ಸಪೆಕ್ಟರ್ ಸಿದ್ದರಾಜು ಮೇಲಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 23ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು, ಮತ್ತೆ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮಾದೇಶ್ ಹಾಜರಾಗಲಿದ್ದಾರೆ.

Leave a Reply

comments

Related Articles

error: