ಸುದ್ದಿ ಸಂಕ್ಷಿಪ್ತ

ಸೆ. 15 ರಂದು ಚುಟುಕು ಕವಿಗೋಷ್ಠಿ

ಮೈಸೂರು,ಸೆ.14-ಹಿರಣ್ಮಯಿ ಪ್ರತಿಷ್ಠಾನ ಮತ್ತು ಮುದ್ದುಕೃಷ್ಣ ಪ್ರಕಾಶದ ವತಿಯಿಂದ ಸೆ. 15 ರಂದು ಬೆಳಿಗ್ಗೆ 10.30ಕ್ಕೆ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ನೆನಪಿಗೆ ಚುಟುಕು ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಸಾಹಿತಿ ಬನ್ನೂರು ಕೆ.ರಾಜು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಹೇಶ್ ಹರವೆ, ಚಿತ್ರಕಲಾವಿದರಾದ ಜಮುನಾರಾಣಿ ಮಿರ್ಲೆ, ಸಂಸ್ಕೃತಿ ಪೋಷಕರಾದ ಯಶೋಧಮ್ಮ ಆಗಮಿಸಲಿದ್ದಾರೆ. ಚಿಂತಕ ಪ್ರಭುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. (ಎಂ.ಎನ್)

 

Leave a Reply

comments

Related Articles

error: