ಪ್ರಮುಖ ಸುದ್ದಿಮೈಸೂರು

ಮಾಜಿ ಸಿಎಂ  ಕುಮಾರಸ್ವಾಮಿ ಅವರು ಕಣ್ಣೀರಲ್ಲಿ ಕೈ ತೊಳೆಯಲು ಸಾರಾ ಮಹೇಶ್ ಕಾರಣ : ಶಾಸಕ   ಹೆಚ್ ವಿಶ್ವನಾಥ್ ಆರೋಪ

ಮೈಸೂರು,ಸೆ.15:- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ದೇವೇಗೌಡ ,ಮಾಜಿ ಸಿಎಂ  ಕುಮಾರಸ್ವಾಮಿ ಅವರು ಕಣ್ಣೀರಲ್ಲಿ ಕೈ ತೊಳೆಯಲು ಸಾರಾ ಮಹೇಶ್ ಕಾರಣ ಎಂದು ಮೈಸೂರಿನಲ್ಲಿ ಅನರ್ಹ ಶಾಸಕ   ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿಂದು   ತಮ್ಮ ಆಪ್ತರ ಮೂಲಕ‌ ವಿಡಿಯೋ ಮಾಡಿ ಹರಿಬಿಟ್ಟಿರುವ ಹಳ್ಳಿ ಹಕ್ಕಿ  ಸಾರಾ ಮಹೇಶ್ ಹಾಗೂ ಅವರ ಬೆಂಬಲಿಗರಿಂದ ಜೆಡಿಎಸ್ ಈ ಸ್ಥಿತಿಗೆ ಬಂದಿದೆ. ಒಕ್ಕಲಿಗರೆ ಜೆಡಿಎಸ್ ಪಕ್ಷ ತೊರೆದು ರಾಜೀನಾಮೆ ಕೊಟ್ಟು ಹೋಗಿದ್ದಾರೆ.ಸಾರಾ ಮಹೇಶ್ ನಾಟಕವಾಡುತ್ತಿದ್ದಾರೆ. ಅದು ಈ ರಾಜ್ಯದ ಜನತೆಗೆ ಗೊತ್ತಿದೆ.ಸದ್ಯ ಬಿಜೆಪಿ ಸರ್ಕಾರ ಅನುದಾನಗಳನ್ನು  ಖಡಿತಗೊಳಿಸುತ್ತಿದೆ ಎಂದು ಹೇಳ್ತಿದ್ದಾರೆ. ಸಾರಾ ಮಹೇಶ್ ತಮ್ಮ ಅವಧಿಯಲ್ಲಿ 700ಕೋಟಿ ಹಣ ಅನುದಾನ ತಂದಿದ್ದೇನೆ ಅಂತಿದ್ದಾರೆ.700ಕೋಟಿ ತಂದಿದ್ರೆ ಆ ಹಣ ಎಲ್ಲಿ ಹೋಯ್ತು ಅಂತ ಹೇಳಲಿ, ಎಲ್ಲಿ ಅಭಿವೃದ್ಧಿ ಆಗಿದೆ ಅಂತ ಹೇಳಲಿ, ಕೇವಲ ನಾಟಕ ಮಾಡುತ್ತ ಜನರಿಗೆ ಹೇಳಿಕೊಂಡು ತಿರುಗಾಡೋದಲ್ಲ. ಅವರು ಹಾಗೇ ಉದ್ಧಾರ ಮಾಡೋ ಹಾಗಿದ್ರೆ ಶ್ರೀರಾಮ ಸಕ್ಕರೆ ಖಾರ್ಕಾನೆ ಉದ್ಧಾರ ಮಾಡ್ತಿದ್ರು. ಸುಖಾ ಸುಮ್ನೆ ಅಲ್ಲಿ ಧರಣಿ ಕುಳಿತಿದ್ದವರಿಗೆ 14 ಕೋಟಿ ವೇತನ‌ ಕೊಡಿಸಿದ್ರು. ಆ ದುಡ್ಡಲ್ಲಿ ಕಾರ್ಖಾನೆನೇ ಮತ್ತೆ ಪುನರ್ ಆರಂಭಿಸಬಹುದಿತ್ತು ಎಂದರು.

ಈಗ ಕ್ಷೇತ್ರದ ಜನರ ಮುಂದೆ ನಾನು ಅಭಿವೃದ್ಧಿ ಮಾಡ್ದೆ ಅಂತ ಹೇಳಿಕೊಂಡು ಓಡಾಡುವುದು ಜನರಿಗೆ ಗೊತ್ತಾಗುತ್ತೆ. ಇನ್ನು ಸಿದ್ದರಾಮಯ್ಯ ವಿರುದ್ಧವೇ ದಂಗೆದ್ದು ನಾಲ್ಕು ಜನ ಕುರುಬ ಶಾಸಕರು ರಾಜೀನಾಮೆ ನೀಡಿದ್ರು. ಮೈತ್ರಿ ಸರ್ಕಾರದಿಂದ ಬೇಸತ್ತು ನಾವೆಲ್ಲರೂ ರಾಜೀನಾಮೆ ನೀಡಿದ್ದೇವೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: