ಪ್ರಮುಖ ಸುದ್ದಿಮೈಸೂರು

ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ಆದರೂ ಕನ್ನಡದಲ್ಲಿರಲಿ,ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅದು ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಸೆ.16:-  ಕರ್ನಾಟಕದಲ್ಲಿ ಯಾವುದೇ ಪರೀಕ್ಷೆ ಆದರೂ ಕನ್ನಡದಲ್ಲಿ ಇರಲಿ. ಕನ್ನಡಕ್ಕೆ ಆದ್ಯತೆ ನೀಡದಿದ್ದರೆ ಅದು ಕನ್ನಡಿಗರಿಗೆ ಅನ್ಯಾಯ ಮಾಡಿದಂತೆ ಎಂದು ಕನ್ನಡದಲ್ಲಿ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕನ್ನಡದಲ್ಲೇ ಪರೀಕ್ಷೆ ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಧ್ವನಿ ಎತ್ತಬೇಕು. ಅಮಿತ್ ಶಾಗೆ ಬುದ್ಧಿ ಕಡಿಮೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ. ದೇಶದ ಎಲ್ಲಾ ಭಾಷೆಗಳಂತೆ ಹಿಂದಿ ಸಹ ಒಂದು. ಹಿಂದಿ ಸಾರ್ವಭೌಮ ಭಾಷೆ ಅಲ್ಲ. ಬಲತ್ಕಾರವಾಗಿ ಯಾವ ಭಾಷೆಯನ್ನು ಹೇರಬಾರದು.ಯಾವ ಭಾಷೆ ಕಲಿಯಲು ನಮ್ಮ ಅಭ್ಯಂತರ ಇಲ್ಲ ಎಂದರು.

ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ಈಶ್ವರಪ್ಪಗೆ ಪ್ರತಿಕ್ರಿಯೆ ನೀಡುವುದನ್ನು ಬಿಟ್ಟಿದ್ದೀನಿ ಎಂದರು. ನೆರೆ ಸಂತ್ರಸ್ತರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ವಿಚಾರ ಕುರಿತು ಪ್ರತಿಕ್ರಿಯಿಸಿ ಅವರೇನು ಧರ್ಮಕ್ಕೆ ಕೊಡುತ್ತಾರಾ ? ಅದೇನು ಸಿಹಿ ಕೊಡೋದು,‌ ಅದು ಅವರ ಕರ್ತವ್ಯ‌‌. 45 ದಿನದಿಂದ ಕೊಟ್ಟಿಲ್ಲದೇ ಇರುವುದನ್ನು ನಾವೇನು ಹೇಳಬೇಕು. ರಾಜ್ಯ ಸರ್ಕಾರದ ಸಿಹಿ ಸುದ್ದಿ ಬಗ್ಗೆ  ವ್ಯಂಗ್ಯವಾಡಿದರು.

ಜಿ‌.ಟಿ ದೇವೇಗೌಡ ಬಿಜೆಪಿ ಜೊತೆ ಹೋಗಲು ಕುಮಾರಸ್ವಾಮಿ ಹೇಳಿದ್ದರು ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜಿ.ಟಿ ದೇವೇಗೌಡರು ಸತ್ಯ ಹೇಳಿರಬೇಕು ನನಗೆ ಗೊತ್ತಿಲ್ಲ ಎಂದರು. ಜೆಡಿಎಸ್ ಶಾಸಕರಿಂದ ಸ್ವಪಕ್ಷದ ಬಗ್ಗೆ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾವು ಹೇಳಿದರೆ ಬಣ್ಣ ಕಟ್ಟಿದರು ಅಂತಾರೆ. ಅವರೇ ಹೇಳಿದರೆ ಜನರಿಗೆ ಸತ್ಯ ಯಾವುದು ಗೊತ್ತಾಗುತ್ತದೆ. ನಾನು ಜೆಡಿಎಸ್ ಪಕ್ಷ ಬಿಟ್ಟವನಲ್ಲ. ಅವರು ನನ್ನನ್ನು ತೆಗೆದು ಹಾಕಿದರು ಎನ್ನುವ ಮೂಲಕ ಮತ್ತೊಮ್ಮೆ ಜೆಡಿಎಸ್ ಪಕ್ಷ ತೊರೆದ ಬಗ್ಗೆ ಸ್ಪಷ್ಟನೆ ನೀಡಿದರು. ಹುಣಸೂರು ಉಪ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜಿ.ಟಿ ದೇವೇಗೌಡರೇ ಹೇಳಿದ್ದಾರೆ ಕಾಂಗ್ರೆಸ್ ಗೆಲ್ಲುತ್ತೆ ಅಂತ. ಬಹುಶಃ ಅವರು ಸತ್ಯ ಹೇಳಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: