ದೇಶಪ್ರಮುಖ ಸುದ್ದಿ

ಪ್ರತಿ ಉಗ್ರ ಕೃತ್ಯದ ಲೆಕ್ಕ ಚುಕ್ತಾ ಮಾಡುತ್ತೇವೆ: ಕೋಝಿಕೋಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ

ಜಮ್ಮು-ಕಾಶ್ಮೀರದ ಉರಿ ಸೇನಾನೆಲೆಯ ಮೇಲೆ ನಡೆದ ದಾಳಿಯಲ್ಲಿ ನಮ್ಮ 18 ಯೋಧರು ಬಲಿದಾನ ಮಾಡಿದ್ದಾರೆ. ಈ ಬಲಿದಾನವನ್ನು ನಾವು ಮರೆಯುವುದಿಲ್ಲ. ಇದಕ್ಕೆ ಪ್ರತ್ಯುತ್ತರ ನೀಡಿಯೇ ಸಿದ್ಧ. ಪ್ರತೀ ಉಗ್ರ ಕೃತ್ಯದ ಲೆಕ್ಕವನ್ನೂ ಚುಕ್ತಾ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇರಳದ ಕೋಝಿಕೋಡ್ ನಲ್ಲಿ ನಡೆಯಿತ್ತಿರುವ ಬಿಜೆಪಿ ಕಾರ್ಯಕಾರಿಣಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಹರಿಹಾಯ್ದರು. ಭಯೋತ್ಪಾದಕರೆಲ್ಲ ಒಂದೇ ದೇಶದವರಾಗಿದ್ದು, ಉರಿ ದಾಳಿಯು ನಮ್ಮ ಪಕ್ಕದ ದೇಶದವರ ಕೃತ್ಯ. ಗಡಿದಾಟಲು ಬಂದವರನ್ನು ನಮ್ಮ ಧೀರ ಯೋಧರು ಹಿಮ್ಮೆಟ್ಟಿಸಿದ್ದಾರೆ. ಸೇನೆಯ ಯೋಧರ ಪರಿಶ್ರಮದ ಬಗ್ಗೆ ಹೆಮ್ಮೆಯಿದೆ. ಆತ್ಮಾಹುತಿ ದಾಳಿಗೆ ಬಂದವರನ್ನು ಮೃತ್ಯುವಿನರಮನೆಗೆ ಅಟ್ಟಿದ್ದೇವೆ.  17ಕ್ಕೂ ಹೆಚ್ಚು ಉಗ್ರ ಚಟುವಟಿಕೆಗಳನ್ನು ತಪ್ಪಿಸಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಸಾಯಿಸಿದ್ದಾರೆ. ಪಾಕಿಸ್ತಾನದ ಮುಖ್ಯಸ್ಥರ ಜತೆ ನಾನು ನೇರವಾಗಿ ಮಾತನಾಡುತ್ತೇನೆ. ಸಾವಿರ ವರ್ಷದವರೆಗೆ ಯುದ್ಧ ಮಾಡುವುದಾಗಿ ಪಾಕ್ ಹೇಳಿದೆ. ಅಷ್ಟು ವರ್ಷ ನೀವೆಲ್ಲಿರುತ್ತೀರಿ? ಎಂದು ಮೋದಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

comments

Tags

Related Articles

error: