ಮೈಸೂರು

ಚಲಿಸುತ್ತಿದ್ದ ಬಸ್ ನ ಚಕ್ರಕ್ಕೆ ಸಿಲುಕಿ ಯುವಕ ಸಾವು

ಚಲಿಸುತ್ತಿದ ಬಸ್ಸಿನ ಮುಂಬದಿಯ ಚಕ್ರಕ್ಕೆ  ಸಿಲುಕಿ ‌‌ಯುವಕನೋರ್ವ ಸಾವನ್ನಪ್ಪಿದ ಘಟನೆ ಕೆ.ಆರ್.ನಗರದ ಬಸ್ ಸ್ಟ್ಯಾಂಡ್ ಬಳಿಯ ಚಂದ್ರಮೌಳೇಶ್ವರ ರಸ್ತೆಯಲ್ಲಿ ನಡೆದಿದೆ.

ಮೃತನನ್ನು ಜೋಡಿಗೌಡ ಕೊಪ್ಪಲಿನ ಸಂತೊಷ್(30) ಎಂದು ಗುರುತಿಸಲಾಗಿದೆ. ಈತ ಬಸ್ ನ ಮುಂಬದಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕೆ.ಆರ್.ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು‌ ಜಿಲ್ಲೆಯ ಕೆ.ಆರ್.ನಗರ ತಾಲೂಕು ಪಕ್ಕದಲ್ಲೇ ಪೋಲಿಸ್ ಚೌಕಿ ಇದ್ದರೂ ಈ ಘಟನೆ ನಡೆದಿದೆ. ಪೊಲಿಸ್ ಚೌಕಿ ಉದ್ಘಾಟನೆಯಾಗಿ ದಿನಗಳೇ ಕಳೆದರೂ ಇಲ್ಲಿಗೆ ಯಾವುದೆ ಸಂಚಾರಿ ಪೋಲಿಸ್ ರನ್ನು ನೇಮಿಸಲಾಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

Leave a Reply

comments

Related Articles

error: