
ಪ್ರಮುಖ ಸುದ್ದಿಮೈಸೂರು
ಸೆ.19ರಂದು ಏಕವ್ಯಕ್ತಿ ನಾಟಕ ‘ಉರಿಯ ಉಯ್ಯಾಲೆ’ : ವಿಶೇಷ ಪ್ರಯೋಗ
ಮೈಸೂರು,ಸೆ.16 : ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನೊಳಗೊಂಡ ಹವ್ಯಾಸಿ ಕಲಾ ತಂಡದಿಂದ ‘ಉರಿಯ ಉಯ್ಯಾಲೆ’ ನಾಟಕವನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ ಎಂದು ನಾಟಕ ನಿರ್ದೇಶಕಿ ಶಶಿಕಲಾ ತಿಳಿಸಿದರು.
ಅಧ್ಯಾಪಕರು, ಡಾಕ್ಟರ್, ಗೃಹಿಣಿಯರು ಸೇರಿದಂತೆ ಸುಮಾರು 9 ಜನ ಮಹಿಳೆಯರನ್ನು ವಿಶೇಷ ತರಬೇತಿ ನೀಡುವ ಮೂಲಕ ನಾಟಕಕ್ಕೆ ಜೀವ ತುಂಬಲು ಸಜ್ಜುಗೊಳಿಸಿದ್ದು, ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ವಿಶೇಷ ಪ್ರಯೋಗವಾಗಿದ್ದು, ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರ ಏಕವ್ಯಕ್ತಿ ನಾಟಕವನ್ನು ಸುಮಾರು ಒಂಬತ್ತು ಕಲಾವಿದರು ವಿವಿಧ ಹಂತಗಳಲ್ಲಿ ತೆರೆ ಮೇಲೆ ಪ್ರಸ್ತುತ ಪಡಿಸಲಿದ್ದು.
ರಂಗಯಾನ ಟ್ರಸ್ಟ್ ಸಹಯೋಗದಲ್ಲಿ ಇದೇ ಸೆ.19ರ ಸಂಜೆ 7 ಗಂಟೆಗೆ ರಂಗಾಯಣದ ಕಿರುರಂಗಮಂದಿರದಲ್ಲಿ ಪ್ರದರ್ಶನವಿದ್ದು, 100ರೂ ಟಿಕೆಟ್ ದರವಾಗಿದೆ, ಸುಮಾರು 1 ಗಂಟೆ 18 ನಿಮಿಷ ಸಮಯವನ್ನೊಳಗೊಂಡಿದೆ ಎಂದರು.
ಪಾತ್ರಧಾರಿಗಳಾದ ಡಾ.ಕಾತ್ಯಾಯಿನಿ, ಅಧ್ಯಾಪಕಿ ಶೃತಿ, ಅರ್ಚನಾ, ಶ್ರೀಮತಿ, ಸರಳ ನಟರಾಜ್, ಸುಮಾ ಪ್ರಶಾಂತ್, ಜಯಶ್ರೀ, ಮೊದಲಾದವರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)