ಮನರಂಜನೆ

`ಎಲ್ಲಿದ್ದೆ ಇಲ್ಲಿ ತನಕ’ ಟೈಟಲ್ ಸಾಂಗ್ ರಿಲೀಸ್

ಬೆಂಗಳೂರು,ಸೆ.16-ನಟ ಸೃಜನ್ ಲೋಕೇಶ್ ಅಭಿನಯದ `ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾದ ಟೈಟಲ್ ಟ್ರ್ಯಾಕ್ ನ ವಿಡಿಯೋ ಸಾಂಗ್ ರಿಲೀಸ್ ಆಗಿದೆ.

ಸೋನು ನಿಗಮ್ ಹಾಡಿರುವ ಹಾಡನ್ನು ಕೇಳಲು ಸೋಗಸಾಗಿದೆ. ಸುಂದರ ತಾಣಗಳಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಇದರಲ್ಲಿ ಕೊಂಚ ರೊಮ್ಯಾನ್ಸ್ ಕೂಡ ಇದ್ದು, ಹಾಡು ಎಲ್ಲರಿಗೂ ಇಷ್ಟವಾಗಲಿದೆ.

ಲವರ್‌ ಬಾಯ್‌ ಲುಕ್‌ನಲ್ಲಿ ಸೃಜನ್ ಲೋಕೇಶ್ ಕಾಣಿಸಿಕೊಂಡಿದ್ದಾರೆ. ಸೃಜನ್ ಗೆ ಜೋಡಿಯಾಗಿ ನಟಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಟೈಟಲ್ ಟ್ರ್ಯಾಕ್‍ಗಳು ಹಿಟ್ ಆಗಿದೆ. ಲೋಕೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಸಿನಿಮಾ ಮೂಡಿಬಂದಿದೆ. (ಎಂ.ಎನ್)

Leave a Reply

comments

Related Articles

error: