ಪ್ರಮುಖ ಸುದ್ದಿ

ಮೈಸೂರು ಪಾಕ್ ತಿನಿಸು ಮೈಸೂರಿನದ್ದೇ !

ದೇಶ(ನವದೆಹಲಿ)ಸೆ.16:-   ಮೈಸೂರು ಪಾಕ್  ಪಾಕ್ ಮೈಸೂರಿನದ್ದಲ್ಲ, ತಮಿಳುನಾಡಿನದ್ದು  ಎಂಬ ವರದಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.  ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಆದರೆ  ಸ್ವರಾಜ್ಯದ ಅಂಕಣಕಾರ ಆನಂದನ್ ರಂಗನಾಥನ್ ಟ್ವೀಟ್ ಮಾಡಿದ್ದು, ಲಘು ಹಾಸ್ಯದ ಟ್ವೀಟ್ ಎಂಬುದು ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಮೂಲಕ ತಿಳಿದು ಬಂದಿದೆ.

ಸ್ವರಾಜ್ಯದ ಅಂಕಣಕಾರ ಆನಂದನ್ ರಂಗನಾಥನ್ ಟ್ವೀಟ್ ಮಾಡಿದ್ದರು, ಮೈಸೂರುಪಾಕ್ ನ ಪಾಕ್ ನ ಭೌಗೋಳಿಕ ಗುರುತನ್ನು ತಮಿಳುನಾಡಿಗೆ ನೀಡುವ ಸಂಬಂಧ ಏಕಸದಸ್ಯ ಸಮಿತಿಯ ಪರವಾಗಿ ಟೋಕನ್ ಆಫ್ ಅಪ್ರಿಸಿಯೇಷನ್ ನ್ನು ಸ್ವೀಕರಿಸಿದ್ದು ಸಂತೋಷವಾಗಿದೆ, ಮಾತುಕತೆ ನಡೆಯುತ್ತಿದೆ ಎಂದಿದ್ದರು.

ಈ ಟ್ವೀಟ್ ನ್ನೇ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ತಮಿಳುನಾಡಿಗೆ ಮೈಸೂರ್ ಪಾಕ್ ನ ಜಿಐ ಸಿಕ್ಕೇ ಬಿಟ್ಟಿದೆಯೇನೋ ಎನ್ನುವಂತೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಮುಗಿಬಿದ್ದಿದ್ದವು. ಆದರೆ ಆ ನಂತರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈ ಸಂಬಂಧ ಟ್ವೀಟ್ ಮಾಡಿದ್ದು, ಆನಂದ್ ರಂಗನಾಥನ್ ಮಾಡಿದ್ದು ಲಘು ಹಾಸ್ಯದ ಟ್ವೀಟ್ ಎಂಬುದಾಗಿ ತಿಳಿದುಬಂದಿದೆ.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: