ಸುದ್ದಿ ಸಂಕ್ಷಿಪ್ತ

ಸರ ಕಸಿದು ಪರಾರಿ

ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆಯಲ್ಲಿದ್ದ  1.20ಲಕ್ಷ ರೂ.ಬೆಲೆ ಬಾಳುವ ಚಿನ್ನದ ಸರ  ಕಸಿದು ಪರಾರಿಯಾದ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.

ಸರ ಕಳೆದುಕೊಂಡವರನ್ನು ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ನಿವಾಸಿ ಜಯಮ್ಮ ಎಂದು ಗುರುತಿಸಲಾಗಿದೆ.  ಜಯಮ್ಮ ತಮ್ಮ ಮನೆಯಿಂದ ಪಕ್ಕದ ಮನೆಗೆ ತೆರಳುತ್ತಿದ್ದಾಗ  ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಅವರ ಕುತ್ತಿಗೆಯಲ್ಲಿದ್ದ 40ಗ್ರಾಂ ನ 1.20ಲಕ್ಷ ರೂ.ಮೌಲ್ಯದ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: