ಸುದ್ದಿ ಸಂಕ್ಷಿಪ್ತ

ನಾಳೆ ಚಾಯ್ ವಾಲ ದಿನ

ಮೈಸೂರು,ಸೆ.16 : ನಗರದ ಪರಿಸರ ಸ್ನೇಹಿ ತಂಡದಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಚಾಯ್ ವಾಲ ದಿನವನ್ನಾಗಿ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಸೆ.17ರಂದು ಬೆಳಗ್ಗೆ 9 ರಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದ ಬಳಿ ಸಾರ್ವಜನಿಕರಿಗೆ ಉಚಿತ ಟೀ ವಿತರಣೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಮಾಜಿ ಮಹಾಪೌರ ಸಂದೇಶಸ್ವಾಮಿ ಸಮಾಜ ಸೇವಕರಾದ ಶಿವಪ್ರಕಾಶ್, ಹೆಚ್.ವಿ.ರಾಜೀವ್ ಹಾಗೂ ಇತರರು ಹಾಜರಿರಲಿದ್ದಾರೆ ಎಂದು ಅಧ್ಯಕ್ಷ ಲೋಹಿತ್ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: