ಮೈಸೂರು

ಜಿ.ಎಸ್.ಎಸ್.ಎಸ್. ಕಾಲೇಜಿನಲ್ಲಿ ಹಿಂದಿ ದಿನ ಆಚರಣೆ

ಮೈಸೂರು,ಸೆ.16:- ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಘದ ಬದರಿಪ್ರಸಾದ್‍ಜಿ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ ಇತ್ತೀಚೆಗೆ ಹಿಂದಿ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿಂದಿ ವಿದ್ಯಾರ್ಥಿಗಳು ಭಾಷೆಯ ಮಹತ್ವ ಹಾಗೂ ವಿಶೇಷತೆಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅಲ್ಲದೇ ಹಿಂದಿ ಭಾಷೆಯಲ್ಲಿ ವಿದ್ಯೆಯ ವಿಷಯದಲ್ಲಿ ತೃಪ್ತ ಮನೋಭಾವವನ್ನು ಬೆಳೆಸಿಕೊಳ್ಳದೇ ಅತೃಪ್ತರಾದಾಗ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗುವುದು, ಅವರ ಜೀವನವು ಯಶಸ್ಸಿನತ್ತ ಸಾಗುವುದು ಎಂಬುದರ ಕುರಿತಾಗಿ ಕಿರು ನಾಟಕವನ್ನು ವಿದ್ಯಾರ್ಥಿಗಳು ಅಭಿನಯಿಸಿದರು. ಹಿಂದಿ ವ್ಯಾಕರಣ ರಸಪ್ರಶ್ನೆಯು ಕಾರ್ಯಕ್ರಮದ ಒಂದು ಭಾಗವಾಗಿ ವಿದ್ಯಾರ್ಥಿಗಳ ಭಾಷಾ ಹಿಡಿತವನ್ನು ಕಂಡುಕೊಳ್ಳಲು ಸಹಕರಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶಾಹಿದಾ ಬಾನು ವಹಿಸಿದ್ದರು. ಸಾಹಿತ್ಯ ಸಂಘದ ಸಂಚಾಲಕರಾದ ಪೂರ್ಣಿಮ ಎನ್.ಎಂ., ಬೋಧಕ – ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: