ದೇಶ

10 ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಡ್ರಗ್ಸ್ ಸಾಗಾಟ: ಓರ್ವನ ಬಂಧನ

ಚೆನ್ನೈ,ಸೆ.17-ಹತ್ತು ಲಕ್ಷಕ್ಕಿಂತಲೂ ಹೆಚ್ಚಿನ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಚೆನ್ನೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಆತನಿಂದ ಚುಚ್ಚುಮದ್ದು ಸೇರಿದಂತೆ ಇನ್ನಿತರ ಅಪಾಯಕಾರಿ ಡ್ರಗ್ಸ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜನ್ ಮಿಶ್ರಾ (46) ಬಂಧಿತ ಆರೋಪಿ. ಏರ್ ಏಷಿಯಾ ವಿಮಾನದಲ್ಲಿ ಕೌಲಲಾಂಪುರ್ ಮೂಲಕ ಕಾಂಬೋಡಿಯಾದಿಂದ ಚೆನ್ನೈ ಗೆ ಬಂದಿಳಿದ ವ್ಯಕ್ತಿಯನ್ನು ಅನುಮಾನದ ಮೇಲೆ ಬಂಧಿಸಿ ತಪಾಸಣೆಗೊಳಪಡಿಸಿದಾಗ ವಿಚಾರ ಬೆಳಕಿಗೆ ಬಂದಿದೆ.

ಈತ 3 ಸಾವಿರಕ್ಕಿಂತಲೂ ಹೆಚ್ಚು ಡ್ರಗ್ಸ್ ಔಷಧಿಗಳ ತುಣುಕನ್ನು ಸ್ಥಳೀಯ ಜಿಮ್ ಗಳಿಗೆ ಸಾಗಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಬೋಡಿಯಾದಲ್ಲಿ ಈ ಔಷಧಿಗಳನ್ನು ಖರೀದಿಸಿದ್ದು, ಚೆನ್ನೈನಲ್ಲಿ ಅದನ್ನು ಜಿಮ್ ಗಳಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶವಿತ್ತು ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. (ಎಂ.ಎನ್)

Leave a Reply

comments

Related Articles

error: