ಮೈಸೂರು

ರಾಮಸ್ವಾಮಿ ಪೆರಿಯಾರ್ ಅವರ 140 ನೇ ಜಯಂತಿ ಆಚರಣೆ

ಮೈಸೂರು,ಸೆ.17:-  ಮೈಸೂರು ಸಮಾನ ಮನಸ್ಕರ ಬಳಗದ ವತಿಯಿಂದ  ರಾಮಸ್ವಾಮಿ ಪೆರಿಯಾರ್ ಅವರ 140 ನೇ ಜಯಂತಿಯನ್ನು ಏಕಲವ್ಯ ವೃತ್ತ, ಅರಸು ಬೋರ್ಡಿಂಗ್ ಶಾಲೆ ಕೋರ್ಟ್ ರಸ್ತೆ  ಇಲ್ಲಿ ಆಚರಿಸಲಾಯಿತು.

ಈ ಸಂದರ್ಭ ಉಪಸ್ಥಿತರಿದ್ದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ ಮಾನವೀಯತೆಯ ಹರಿಕಾರ, ಶೋಷಿತರ ಬಂಧು, ಮಹಾ ಮಾನವತಾವಾದಿ ರಾಮಸ್ವಾಮಿ ಪೆರಿಯಾರ್ ಅವರ 140ನೇ ಜಯಂತಿಯನ್ನು ಸಮಾನ ಮನಸ್ಕ ವೇದಿಕೆ ವತಿಯಿಂದ ಆಚರಿಸಿದ್ದೇವೆ. ಈ ದೇಶ ಆರ್ಯರ ದೇಶವಲ್ಲ. ದ್ರಾವಿಡರ ದೇಶ. ಮೂಲ ನಿವಾಸಿಗಳ, ರೈತರ, ಕಾರ್ಮಿಕರ, ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ದೇಶ ಎಂದಿದ್ದರು. ತಾವೇ ಪಕ್ಷ ಕಟ್ಟುವ ಮೂಲಕ ಹೋರಾಟದ ಮನೋಭಾವವನ್ನು ತುಂಬಿ ಎಲ್ಲ ಕ್ಷೇತ್ರಗಳಿಗೂ ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಸರ್ವರಿಗೂ ಸಮಬಾಳು, ಸಮಪಾಲು ಸಿಗಬೇಕೆಂದು ಆಶಿಸಿದರು. ದ್ರಾವಿಡ ನಾಯಕರನೇಕರನ್ನು ಸೃಷ್ಟಿಸಿದರು. ಪೆರಿಯಾರ ಮುಂದೆ ಪ್ರಧಾನಿ ಮೋದಿ, ಅಮಿತ್ ಶಾ ಆಟ ಏನೂ ನಡೆಯಲ್ಲ ಎಂಬುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: