Uncategorized

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಶುಭಾರಂಭ ಮಾಡಿದ ವಿನೇಶ್ ಫೊಗಾಟ್

ನೂರ್‌-ಸುಲ್ತಾನ್‌ (ಕಜಕೀಸ್ತಾನ್),ಸೆ.17- ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ನಲ್ಲಿ ಏಷ್ಯನ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಭಾರತದ ವಿನೇಶ್‌ ಫೊಗಾಟ್‌ ಶುಭಾರಂಭ ಮಾಡಿದ್ದಾರೆ.

ಮಹಿಳೆಯರ 53 ಕೆ.ಜಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ವಿನೇಶ್‌ ಫೊಗಾಟ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಸೋಫಿಯಾ ಮ್ಯಾಟ್ಸನ್ ವಿರುದ್ಧ 12-0 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಪಂದ್ಯದ ಮೊದಲ ಸುತ್ತಿನಲ್ಲೇ ಫೊಗಾಟ್‌ 8-0 ಭರ್ಜರಿ ಆರಂಭ ಕಂಡರು. ಎರಡನೇ ಸುತ್ತಿನಲ್ಲಿ ಭಾರತದ ಕುಸ್ತಿಪಟುವನ್ನು ನಿಯಂತ್ರಿಸಲು ಸೋಫಿಯಾ ಭಾರಿ ಪ್ರಯತ್ನ ನಡೆಸಿದರು. ಆದರೆ, ವಿನೇಶ್‌ ಫೊಗಾಟ್‌, ಯುರೋಪಿಯನ್‌ ಚಾಂಪಿಯನ್‌ ಅನ್ನು ನೆಲಕ್ಕೆ ಕೆಡವಿ ನಾಲ್ಕು ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಮೂಲಕ 12-0 ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡರು. (ಎಂ.ಎನ್)

Leave a Reply

comments

Related Articles

error: