ಪ್ರಮುಖ ಸುದ್ದಿಮೈಸೂರು

ನಟ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ರಾಷ್ಟ್ರೀಯ ಆದರ್ಶ ದಿನವನ್ನಾಗಿ ಆಚರಣೆಗೆ ಮನವಿ

ಮೈಸೂರು, ಸೆ.17 : ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಬುಧವಾರ ರಾಷ್ಟ್ರೀಯ ಆದರ್ಶ ದಿನವನ್ನಾಗಿ ಆಚರಿಸುತ್ತ, ಈ ವೇಳೆ ನಗರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ಅಂಗವಾಗಿ ಅಂದು ಬೆಳಗ್ಗೆ 8.30ಕ್ಕೆ ನಿಮಿಷಾಂಬ ನಗರದ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಸಸಿ ನೆಡಲಿದ್ದು, ಎನ್.ಕೆ. ರಾಜೇಂದ್ರ ಬಾಬು ಉದ್ಘಾಟಿಸುವರು, ಕೆ.ಜೆ. ರಮೇಶ್ ಹಾಜರಿರುವರು.

ಬೆಳಗ್ಗೆ 9.30ಕ್ಕೆ ಅಲ್ಲಿಯೇ ರಕ್ತದಾನ ಶಿಬಿರ ನಡೆಯಲಿದ್ದು, ಜಿ.ಸಿ. ರಾಜು ಉದ್ಘಾಟಿಸುವರು, ಡಾ. ಚಂದ್ರಶೇಖರ್ ಹಾಜರಿರುವರು.

ಬಳಿಕ ಬೆಳಗ್ಗೆ 10ಕ್ಕೆ ವಿವೇಕಾನಂದ ವೃತ್ತದಿಂದ ಡಾ. ವಿಷ್ಣುವರ್ಧನ್ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಎಚ್. ಚೆನ್ನಪ್ಪ, ಜಿ.ಡಿ. ಹರೀಶ್‌ಗೌಡ, ಶ್ರೀವತ್ಸ, ಲೋಕೇಶ್, ಬಿ. ಯಶ್ವಂತ್, ಎಂ.ಎಸ್. ದರ್ಶನ್, ಇನನಿತರರು ಹಾಜರಿರುವರು.

ನಂತರ ಮಧ್ಯಾಹ್ನ 12ಕ್ಕೆ ಬಡಾವಣೆಯ ತಮ್ಮ ಕಚೇರಿ ಬಳಿ ಬಡ ಮಹಿಳೆಯರಿಗೆ ಸೀರೆ ವಿತರಣೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮೊದಲಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗೌರವಾಧ್ಯಕ್ಷ ಎಸ್.ಕೆ. ಮಂಜುನಾಥ್, ರೋಹಿತ್‌ಗೌಡ, ಕುಮಾರ್, ಮಹೇಶ್, ಹರಿಪ್ರಸಾದ್, ನಾಗರಾಜು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: