ಮೈಸೂರು

ಗಿರಿಯಾ ಭೋವಿಪಾಳ್ಯ ರಸ್ತೆಗಳ ದುರಸ್ತಿ ಶುಚಿತ್ವ ಕಾಪಾಡಲು ಆಗ್ರಹ

 

ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಮೈಸೂರು  ಮಹಾನಗರ ಪಾಲಿಕೆ ವ್ಯಾಪ್ತಿಯ  ವಾರ್ಡ್ ನಂಬರ್ 57 ರಲ್ಲಿ ಬರುವ ರಾಘವೇಂದ್ರ ನಗರ 2 ನೇ ಕ್ರಾಸ್ ಮತ್ತು ಗಿರಿಯಾ ಭೋವಿಪಾಳ್ಯ ರಸ್ತೆಗಳ ದುರಸ್ತಿ ಹಾಗೂ ಶುಚಿತ್ವ ಕಾಪಾಡುವಂತೆ ಆಗ್ರಹಿಸಿದೆ.

ಸೇನೆಯ ಕಾರ್ಯಕರ್ತರು ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದು,  ಕಳೆದ ಎರಡು ವರ್ಷದ ಹಿಂದೆ ಯುಜಿಡಿ ಲೈನ್ ಹಾಗೂ ರಿಲಾಯನ್ಸ್ ಪೈಪ್ ಅಳವಡಿಸಲು ರಸ್ತೆಯನ್ನು ಅಗೆಯಲಾಗಿದೆ. ಅಂದಿನಿಂದ ಸದರಿ ರಸ್ತೆಗಳ ಹಳ್ಳ ಬಿದ್ದು, ವಾಹನ ಸವಾರರು ನಿತ್ಯ ಸಂಚರಿಸಲು ಪರದಾಡುವಂತಾಗಿದೆ. ಅಲ್ಲದೆ ರಸ್ತೆ ಅವ್ಯವಸ್ಥೆಯಿಂದಾಗಿ ಒಳ ಚರಂಡಿಗಳಲ್ಲಿ ನೀರು ಕಟ್ಟಿಕೊಂಡು ವಾಸನೆ ಹರಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಸದರಿ ರಸ್ತೆಗಳಲ್ಲಿ ಅಪಘಾತ ಆಗುವ ಮುನ್ನವೇ ಸಂಬಂಧ ಪಟ್ಟ ನಗರಪಾಲಿಕೆ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿ, ರಸ್ತೆಯಲ್ಲಿ ಶುಚಿತ್ವ ಕಾಪಾಡಬೇಕೆಂದು ಆಗ್ರಹಿಸಿದರು. ಎಲ್ಲವಾದರೆ  ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಸೇನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಮೂರ್ತಿ, ಉಪಾಧ್ಯಕ್ಷೆ ಭಾನುಮತಿ, ಖಜಾಂಚಿ ಎನ್. ಶ್ರೀಕಂಠಮೂರ್ತಿ, ಸಂಘಟನಾ ಕಾರ್ಯದರ್ಶಿ ಜಯಮ್ಮ, ಮಂಜುಳಾ, ಶಾಂತಿ ಮತ್ತಿತರರು ನಗರಪಾಲಿಕೆ ಆಯುಕ್ತ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು

Leave a Reply

comments

Related Articles

error: