ಮೈಸೂರು

ಜೂಡೋ ,ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಸನ್ಮಾನ

ಮೈಸೂರು,ಸೆ.17:- ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಮೈಸೂರು ಸಂಸ್ಥೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಚಿಕ್ಕಬಳ್ಳಾಪುರದ ಎಸ್. ಜೆ. ಸಿ. ಐ. ಟಿ. ಯಲ್ಲಿ ಆಯೋಜಿಸಿದ್ದ ಅಂತರ ಕಾಲೇಜು ಜೂಡೋ ಹಾಗೂ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ಇ. ಸಿ. ಇ. ವಿಭಾಗದ 3ನೇ ಸೆಮಿಸ್ಟರ್ ವಿದ್ಯಾರ್ಥಿಯಾದ ರವಿ ಕುಮಾರ್ ಚಿನ್ನದ ಪದಕವನ್ನು ಗಳಿಸಿದ್ದು ರಾಷ್ಟೀಯ ಮಟ್ಟದಲ್ಲಿ ವಿ.ವಿ. ಯನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾರೆ. ಹಾಗೆಯೇ ಮೆಕ್ಯಾನಿಕಲ್ ವಿಭಾಗದ 3ನೇ ಸೆಮಿಸ್ಟರ್ ವಿದ್ಯಾರ್ಥಿ ಪವನ್ ಕುಮಾರ್ ಬೆಳ್ಳಿ ಪದಕವನ್ನು ಗಳಿಸಿರುತ್ತಾರೆ.
ಇನ್ಫೋಸಿಸ್ ಸಂಸ್ಥೆಯ ಮೈಸೂರು ಘಟಕವು ಆಯೋಜಿಸಿದ್ದ ಅಂತರ ಕಾಲೇಜು “ಹ್ಯಾಕಥಾನ್” ಎಂಬ ತಾಂತ್ರಿಕ ಸ್ಪರ್ಧಾಕೂಟದಲ್ಲಿ ಭಾಗವಹಿಸಿದ್ದ ಕಾಲೇಜಿನ ಇನ್ನೊಂದು ತಂಡ ಎರಡನೇ ಸ್ಥಾನವನ್ನು ಗಳಿಸಿದೆ. ಶಿವಶಂಕರ್, ಮೋಹನ್ ಕೃಷ್ಣ, ಲಕ್ಷ್ಮೀಶ್, ಸ್ನೇಹಿಲ್ ದಾಸ್ ಹಾಗೂ ಭರತ್ ರವರುಗಳಿದ್ದ ತಂಡ ಮೈಸೂರು ವಿಭಾಗದ ಸುಮಾರು 15 ಕಾಲೇಜಿನ 36 ಕ್ಕೂ ಹೆಚ್ಚು ತಂಡಗಳೊಂದಿಗೆ 30 ಘಂಟೆಗಳಿಗೂ ಆಧಿಕ ಸಮಯ ನಿರಂತರವಾಗಿ ಸ್ಪರ್ಧಿಸಿ ಈ ಬಹುಮಾನಕ್ಕೆ ಭಾಜನರಾಗಿರುತ್ತಾರೆ. ಈ ತಂಡವನ್ನು ಸಜ್ಜುಗೊಳಿಸಿದ ಸಂಸ್ಥೆಯ ಪ್ಲೇಸ್ಮೆಂಟ್ ಸಹಯಾಧಿಕಾರಿಯಾದ ಶಿವ ಸಾಗರ್ ರವರು ಸ್ಪರ್ಧಾಕೂಟದ “ಅತ್ಯುತ್ತಮ ಮಾರ್ಗದರ್ಶಿ” ಪ್ರಶಸ್ತಿಯನ್ನು ಪಡೆದರು.

ಈ ಎಲ್ಲಾ ಬಹುಮಾನ ವಿಜೇತರನ್ನು ಸಂಸ್ಥೆಯ ವತಿಯಿಂದ ಕಾಲೇಜಿನ ಆವರಣದಲ್ಲಿಂದು ಸನ್ಮಾನಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಬಿ. ಜಿ. ನರೇಶ್ ಕುಮಾರ್, ಅಧ್ಯಕ್ಷರಾದ ಡಾ. ಎಸ್. ಮುರಳಿ ಹಾಗೂ ಕಾರ್ಯದರ್ಶಿಗಳಾದ ಡಾ. ಟಿ. ವಾಸುದೇವ್ ರವರು ಕಾಲೇಜಿನ ಪರವಾಗಿ ಬಹುಮಾನಗಳನ್ನು ವಿತರಿಸಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. (ಎಸ್.ಎಚ್)

Leave a Reply

comments

Related Articles

error: