ಮೈಸೂರು

ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಪೊಲೀಸ್ ಶ್ವಾನದಳದ ‘ಸ್ವೀಟಿ’

ಮೈಸೂರು,ಸೆ.18:- ಮೈಸೂರು ಪೊಲೀಸ್ ಶ್ವಾನದಳದ ಶ್ವಾನ ಸ್ವೀಟಿ ಅನಾರೋಗ್ಯದಿಂದಾಗಿ ಸಾವನ್ನಪ್ಪಿದೆ.

ಜರ್ಮನ್ ಶೆಫರ್ಡ್ ತಳಿಯ ಈ ಶ್ವಾನ ಕಳೆದ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಶ್ವಾನದಳದ ಕಛೇರಿ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜಿಲ್ಲಾ ಶ್ವಾನದಳದಲ್ಲಿರುವ ಆರು ಶ್ವಾನಗಳ ಪೈಕಿ ಈಗ ಐದು ಮಾತ್ರ ಉಳಿದಿವೆ ಎಮದು ಪೊಲೀಸರು ತಿಳಿಸಿದ್ದು, ಸ್ವೀಟಿ 2014ರಲ್ಲಿ ಪೊಲೀಸ್ ಶ್ವಾನದಳವನ್ನು ಸೇರಿದ್ದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪ್ರಧಾನ ಪಾತ್ರ ವಹಿಸಿತ್ತು. 2016,2017, 2018ರಲ್ಲಿ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: