ಮೈಸೂರು

ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ : 157ಗ್ರಾಂ ಗಾಂಜಾ ವಶ

ಮೈಸೂರು,ಸೆ.18:- ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಂಡಿ ಠಾಣೆಯ ಪೊಲೀಸರು ಬಂಧಿಸಿದ್ದು, ಆತನಿಂದ 157ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಮಂಡಿಮೊಹಲ್ಲಾದ ಎಂಕೆಡಿಕೆ ರಸ್ತೆಯ ನಿವಾಸಿ ಸೈಯದ್ ಸದ್ದಾಂ(21)ಎಂದು ಗುರುತಿಸಲಾಗಿದ್ದು, ಈತ ಸೋಮವಾರ ಸಂಜೆ ಪೊಲೀಸರು ಗಸ್ತಿನಲ್ಲಿರುವಾಗ ತನ್ನ ಮನೆಯ ಮುಂದೆ ಕವರ್ ಒಂದನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಕವರ್ ನಲ್ಲಿ 157 ಗ್ರಾಂ ಗಾಂಜಾ ಪತ್ತೆಯಾಗಿದೆ.

ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: