ಮೈಸೂರು

ಜಮೀನಿಗೆ ತೆರಳಿದ್ದ ಮಹಿಳೆಯ ತಲೆಯ ಮೇಲೆ ಕಲ್ಲೆತ್ತಿ ಹಾಕಿ ಕೊಲೆ : ಹುಣಸೂರು ತಾಲೂಕಿನ‌ ಬಿಳಿಗೆರೆ ಗ್ರಾಮದಲ್ಲಿ ಘಟನೆ

ಮೈಸೂರು,ಸೆ.18:- ಜಮೀನಿಗೆ ತೆರಳಿದ್ದ ವೇಳೆ ಮಹಿಳೆಯೋರ್ವರ ತಲೆಯ ಮೇಲೆ ಕಲ್ಲೆತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆಯನ್ನು ರಜಿನಿ(35)  ಎಂದು ಗುರುತಿಸಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ‌ ಬಿಳಿಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು,  ಬಿಳಿಗೆರೆ ಗ್ರಾಮದ ಶಿವಣ್ಣೇಗೌಡ ಎಂಬವರ ಪತ್ನಿ ರಜಿನಿ ಜಮೀನಿಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: