ಮೈಸೂರು

ಎಚ್1ಎನ್1 ಬಗ್ಗೆ ಜಾಗೃತಿ ಮೂಡಿಸಬೇಕಿದೆ : ಜಿಲ್ಲಾಧಿಕಾರಿ ರಂದೀಪ್ ಕರೆ

ಸಾಂಕ್ರಾಮಿಕ ರೋಗವಾದ ಎಚ್.1ಎನ್1 ಸೋಂಕನ್ನು ಹರಡುವ ಮುನ್ನವೇ ನಿಯಂತ್ರಿಸುವ ಬಗ್ಗೆ ಜಿಲ್ಲೆಯಾದ್ಯಂತ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವ  ಕುರಿತು  ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರಂದೀಪ್ ಅಧ್ಯಕ್ಷತೆಯಲ್ಲಿ ಎಚ್1ಎನ್1 ಸೋಂಕು ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಸಾರ್ವಜನಿಕರಲ್ಲಿ ರೋಗದ ಕುರಿತು ಮೂಡಿರುವ ಭೀತಿಯನ್ನು ತೊಲಗಿಸಲು ಪ್ರಾಥಮಿಕ ಅರಿವು ಮೂಡಿಸುವ ಅವಶ್ಯಕತೆಯಿದೆ. ಸೊಳ್ಳೆಗಳ ನಿಯಂತ್ರಣದ ಜೊತೆ  ಪರಿಸರವನ್ನು ಸ್ವಸ್ಛವಾಗಿರಿಸಬೇಕು. ಶೀತ ಹಾಗೂ ಜ್ವರವನ್ನು ನಿರ್ಲಕ್ಷ್ಯಿಸದೆ ಸೂಕ್ತ ಮುಂಜಾಗೃತಾ ಕ್ರಮವಹಿಸಿ ವೈದ್ಯರಿಂದ ತಪಾಸಣೆ ನಡೆಸಿಕೊಂಡು ಸೂಕ್ತ ಔಷಧೋಪಚಾರ ನಡೆಸಿ ಎಂದು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಮಾತನಾಡಿ ಎಚ್.1ಎನ್1 ಸೋಂಕಿಗೆ ಸಂಬಂಧಿಸಿದಂತೆ ಗಂಟಲು ಕೋಶದ ಮಾದರಿ ಪರೀಕ್ಷೆ vtm ಪ್ರಮುಖ ಪಾತ್ರವಹಿಸಲಿದೆ. ಪರೀಕ್ಷೆಯನ್ನು ಉಚಿತವಾಗಿ ನಡೆಸಿ ಫಲಿತಾಂಶ ನೀಡುವ ವ್ಯವಸ್ಥೆಯನ್ನು ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಒದಗಿಸಲಾಗಿದೆ. ಅಲ್ಲದೇ ಬೇಡಿಕೆಯಿಡುವ ಖಾಸಗಿ ಆಸ್ಪತ್ರೆಗಳಿಗೂ ಟ್ಯಾಮೀ ಫ್ಲೂ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು. ಕೆಮ್ಮು,ಜ್ವರ, ತೀವ್ರ ಶೀತ, ಗಂಟಲ ನೋವು, ವಾಂತಿ,ಭೇದಿ ಉಸಿರಾಟದ ತೊಂದರೆಗಳು ಗೋಚರಿಸಿದರೆ ನಿರ್ಲಕ್ಷ್ಯಿಸದೇ ವೈದ್ಯಕೀಯ ತಪಾಸಣೆಗೊಳಪಡಬೇಕಿದೆ. ಸದಾ ಕರವಸ್ತ್ರವನ್ನು ಬಳಸಿ, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ, ಹಸ್ತಲಾಘವದಿಂದ ದೂರವಿರಿ ಎಂದು ಸಲಹೆಗಳನ್ನು ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜು, ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ್, ಜೆ.ಎಸ್.ಎಸ್. ಆಸ್ಪತ್ರೆ, ಶಾಂತವೇರಿ ಗೋಪಾಲಗೌಡ ಆಸ್ಪತ್ರೆ, ಮಿಷನ್ ಆಸ್ಪತ್ರೆ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

comments

Related Articles

error: