
ಪ್ರಮುಖ ಸುದ್ದಿಮೈಸೂರು
ಸೆ.21ರಂದು ಡಾ.ಸುತ್ತೂರು ಎಸ್.ಮಾಲಿನಿಯವರ ವೈದ್ಯಕೀಯ ಪುಸ್ತಕಗಳ ಬಿಡುಗಡೆ
ಮೈಸೂರು. ಸೆ.18: ಮೈಸೂರು ವಿವಿಯ ಪ್ರಾಣಿ ಶಾಸ್ತ್ರ ವಿಭಾಗ ಮಾನವ ತಳಿಶಾಸ್ತ್ರ ಪ್ರಯೋಗಾಲಯ ಪ್ರಾಧ್ಯಾಪಕಿಯಾದ ಡಾ.ಸುತ್ತೂರು ಎಸ್.ಮಾಲಿನಿ ಅವರು ರಚಿಸಿರುವ ವೈದ್ಯಕೀಯ ಪುಸ್ತಕಗಳ ಬಿಡುಗಡೆಯನ್ನು ಸೆ.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥರಾದ ಪ್ರೊ.ನೀಲಗಿರಿ.ತಳವಾರ್ ತಿಳಿಸಿದರು.
ಇಂಗ್ಲಿಷ್ ಮಾಧ್ಯಮದ ವ್ಯಾಮೋಹದಿಂದ ಹೊರ ಬಂದು ಸಾಮಾನ್ಯರಿಗೂ ವೈದ್ಯಕೀಯ ಜ್ಞಾನ ತಲುಪಬೇಕೆಂಬ ಸದುದ್ದೇಶದಿಂದ ಕನ್ನಡದಲ್ಲಿಯೇ ‘ಅನುವಂಶೀಯ ಕಾಯಿಲೆಗಳು’ ಮತ್ತು ‘ವೈದ್ಯಕೀಯ ವೈರುಧ್ಯಗಳು’ ಎಂಬ ಪುಸ್ತಕಗಳನ್ನು ರಚಿಸಿದ್ದು ಲೇಖಕಿಯ ಹೆಗ್ಗಳಿಕೆ ಈ ಪುಸ್ತಕಗಳನ್ನು ಅಂದು ಸಂಜೆ ನಾಲ್ಕು ಗಂಟೆಗೆ ವಿಜ್ಞಾನ ಭವನದಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮೈವಿವಿ ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆ. ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸಂಸದರಾದ ಪ್ರತಾಪ್ ಸಿಂಹ, ಶ್ರೀ ನಿವಾಸ ಪ್ರಸಾದ್ ಪುಸ್ತಕ ಬಿಡುಗಡೆ ಗೊಳಿಸುವರು. ಲೇಖಕ ಪ್ರೊ.ಎಚ್.ಎಸ್ ಹೆಗಡೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಲೇಖಕಿ ಡಾ.ಸುತ್ತೂರು ಮಾಲಿನಿ ಮಾತನಾಡಿ, ತಮ್ಮ ಇಪ್ಪತ್ತು ವರ್ಷಗಳ ಸೇವಾವಧಿಯ ಅಧ್ಯಯನ ಅನುಭವವನ್ನೊಳಗೊಂಡ ಪುಸ್ತಕ ಬರೆದಿರುವೆ. ಪುಸ್ತಕ ರಚನೆ ಹಿನ್ನಲೆಯಲ್ಲಿ ಆಸ್ಪತ್ರೆಗಳಿಗೆ ಬೇಟಿ ನೀಡ ರೋಗಿಗಳ ಪರೀಕ್ಷೆ ಹಾಗೂ ಅಧ್ಯಯನ ನಡೆಸುತ್ತಿದ್ದೆ. ಪುಸ್ತಕವನ್ನು ಸ್ವಪ್ನ ಬುಕ್ ಸ್ಟಾಲ್ ಪ್ರಕಟಿಸಿದೆ. ಜನ ಸಾಮಾನ್ಯರಿಗೂ ಅನುವಂಶೀಯ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಬೇಕೆಂಬ ಉದ್ದೇಶದಿಂದ ರಚಿಸಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
185 ಪುಟಗಳ ಅನುವಂಶೀಯ ಕಾಯಿಲೆಗಳ ಪುಸ್ತಕ 150 ರೂ ಹಾಗೂ 180 ಪುಟಗಳ ವೈದ್ಯಕೀಯ ವೈರುದ್ಯಗಳು ಪುಸ್ತಕವು 140 ರೂ ಒಳಗೊಂಡಿದ್ದು. ಸ್ವಪ್ನ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿರಲಿವೆ ಎಂದರು.
ಡಾ.ಸಿ.ಶರತ್ ಕುಮಾರ್, ಸಂಶೋಧನಾ ವಿದ್ಯಾರ್ಥಿಗಳಾದ ಸಂಗಮೇಶ್ , ಲಕ್ಷ್ಮೀ ಗೋಷ್ಠಿಯಲ್ಲಿ ಇದ್ದರು.(ವರದಿ: ಕೆ.ಎಂ.ಆರ್)