ದೇಶಪ್ರಮುಖ ಸುದ್ದಿ

ಉಗ್ರರ ದಾಳಿ : ಮೂವರು ಯೋಧರು ಹುತಾತ್ಮ ; ಮುಂದುವರಿದ ಕಾರ್ಯಾಚರಣೆ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದರಿಂದ ಮೂವರು ಯೋಧರು ಹುತಾತ್ಮರಾಗಿದ್ದಾ. ಮಾಟ್ರಿಗಂ ಎಂಬಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮಾಡಿ ವಾಹನದಲ್ಲಿ ಬರುತ್ತಿದ್ದ ಸೇನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.

ಉಗ್ರರು ದಾಳಿ ನಡೆಸುತ್ತಿದ್ದಂತೆ ಭಾರತೀಯ ಸೇನೆ ತೀವ್ರ ಪ್ರತಿದಾಳಿ ನಡೆಸಿದೆ. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಜೊತೆಗೆ 6 ಜನರಿಗೆ ಗಾಯಗಳಾಗಿವೆ. ಉಗ್ರರ ದಾಳಿಗೆ ಸೇನಾಪಡೆ ದಿಟ್ಟ ಉತ್ತರ ನೀಡುತ್ತಿದ್ದಂತೆ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಕಳೆದ ಮೂರು ವಾರಗಳಲ್ಲಿ ಕಾಶ್ಮೀರದಲ್ಲಿ ನಾಲ್ಕನೇ ಬಾರಿ ಉಗ್ರರ ದಾಳಿ ನಡೆದಿದೆ. ದಾಳಿ ನಡೆದ ಪ್ರದೇಶದ ಸುತ್ತಲೂ ಸೇನಾಪಡೆ ಸುತ್ತುವರೆದಿದ್ದು, ಉಗ್ರರಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: