ಸುದ್ದಿ ಸಂಕ್ಷಿಪ್ತ
ಕೃತಿಗಳ ಬಿಡುಗಡೆ – ಲೇಖಕರೊಂದಿಗೆ ಸಂವಾದ.20.
ಮೈಸೂರು,ಸೆ.18 : ನವಕರ್ನಾಟಕ 60ನೇ ಸಂಭ್ರಮದಂಗವಾಗಿ ಹನ್ನೆರಡು ಕೃತಿಗಳ ಲೋಕಾರ್ಪಣೆ ಪುಸ್ತಕ ಪ್ರದರ್ಶನ ಉದ್ಘಾಟನೆ ಹಾಗೂ ಲೇಖಕರೊಂದಿಗೆ ಸಂವಾದವನ್ನು ಸೆ.20ರ ಸಂಜೆ 4 ಗಂಟೆಗೆ ದಿ ಇನ್ ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ನಲ್ಲಿ ಏರ್ಪಡಿಸಲಾಗಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಬಿ.ಮಂಜುನಾಥ್ ಉದ್ಘಾಟಿಸುವರು, ಯು.ಎಸ್.ಶ್ರೀಧರ ಆರಾಧ್ಯ, ನಿವೇದಿತಾ, ಕೆ.ಎಸ್.ಪ್ರಾಣೇಶ್ ಕೃತಿ ಪರಿಯಚ ಮಾಡುವರು, ಕೃಪಾಕರ ಸೇನಾನಿ, ಸಂಜಯ್ ಗುಬ್ಬಿ ಸಂವಾದದಲ್ಲಿ ಭಾಗಿಯಾಗಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)