ಸುದ್ದಿ ಸಂಕ್ಷಿಪ್ತ

ನಾಳೆ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಯವರ 104ನೇ ಜಯಂತಿ

ಮೈಸೂರು,ಸೆ.18 : ಜೆಎಸ್ಎಸ್ ಮಹಿಳಾ ಕಾಲೇಜು ಮತ್ತು ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜು ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮಿಗಳ 104ನೇ ಜಯಂತಿ ಮಹೋತ್ಸವ ಸಾಂಸ್ಕೃತಿಕ, ಸಾಹಿತ್ಯಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ಸೆ.19ರಂದು ಬೆಳಗ್ಗೆ 11 ಏರ್ಪಡಿಸಲಾಗಿದೆ.

ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ. ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸುವರು, ಪಾಲಿಕೆ ಸದಸ್ಯೆ ಸಿ.ವೇದಾವತಿ, ಅಂತರಾಷ್ಟ್ರೀಯ ಮಟ್ಟದ ಅಥ್ಲೇಟ್  ಎಂ.ಆರ್.ಧನುಷ್ ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: