ದೇಶಪ್ರಮುಖ ಸುದ್ದಿ

ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಜನತೆಗೆ ಶುಭಕೋರಿದ ಜಮ್ಮು-ಕಾಶ್ಮೀರ ಸಿಎಂ

ಜಮ್ಮು: ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರು ಹಿಂದೂಗಳ ಪವಿತ್ ಹಬ್ಬ ಮಹಾಶಿವರಾತ್ರಿ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಮಹಾಶಿವರಾತ್ರಿಯ ಪವಿತ್ರ ದಿನದ ಸಂದರ್ಭದಲ್ಲಿ ಕಾಶ್ಮೀರ ಕಣಿವೆ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಹೊಸ ಯುಗ ಕಾಣುವಂತಾಗಲಿ ಎಂದು ಮೆಹಬೂಬಾ ಮುಫ್ತಿ ಆಶಯ ವ್ಯಕ್ತಪಡಿಸಿದ್ದಾರೆ.

“ಮಹಾಶಿವರಾತ್ರಿ ಕಾಶ್ಮೀರದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿದ್ದು, ಧರ್ಮ ಭೇದವಿದಲ್ಲದೆ ಎಲ್ಲ ಮತಧರ್ಮದ ಜನರೂ ಶಿವರಾತ್ರಿಯನ್ನು ಆಚರಿಸುತ್ತಾರೆ. ಶಿವರಾತ್ರಿ ಅಂಗವಾಗಿ ಕಾಶ್ಮೀರಿ ಹಿಂದೂಗಳು ಭಾವೈಕ್ಯತೆಯಿಂದ ಹೈರಾತ್ ಆಚರಿಸುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಕಾಶ್ಮೀರಿ ಪಂಡಿತರ ಕ್ಯಾಂಪ್‍ಗಳಿಗೆ ಭೇಟಿ:

ಮುಸ್ಲಿಂ ಬಹುಸಂಖ್ಯಾತ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಮುಖ್ಯಮಂತ್ರಿಯೊಬ್ಬರು ಮಹಾಶಿವರಾತ್ರಿಗೆ ಶುಭ ಕೋರಿದ್ದು, ಇತ್ತಿಚೆಗೆ ಇದೇ ಮೊದಲು. ಮೆಹಬೂಬಾ ಮುಫ್ತಿ ಅವರು ಇದೀಗ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದರ ಜೊತೆಗೆ ನಿರಾಶ್ರಿತ ಕಾಶ್ಮೀರಿ ಪಂಡಿತರಿಗೆ ವ್ಯವಸ್ಥೆ ಮಾಡಿರುವ ಹಲವು ಕ್ಯಾಂಪ್‍ಗಳಿಗೆ ಅವರು ಭೇಟಿ ನೀಡಿ ಕಾಶ್ಮೀರಿ ಪಂಡಿತರಿಗೆ ಸಾಂತ್ವನ ಹೇಳಿದ್ದಾರೆ. ಇಷ್ಟೇ ಅಲ್ಲದೇ ಎಲ್ಲ ಕಾಶ್ಮೀರಿ ಪಂಡಿತರೂ ವಾಪಸ್ ಬಂದು ನೆಲೆಸುವಂತಾಗಬೇಕು ಎಂದು ಮೆಹಬೂಬಾ ಅವರು ಸದಾಶಯ ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: