ಮನರಂಜನೆಮೈಸೂರು

ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆ ಟಾಂಗಾ ಏರಿ ಮೈಸೂರು ನಗರ ಪ್ರದಕ್ಷಿಣೆ ನಡೆಸಿದ ನವರಸ ನಾಯಕ, ನಟ ಜಗ್ಗೇಶ್

ಮೈಸೂರು,ಸೆ.19:- ನವರಸ ನಾಯಕ ನಟ ಜಗ್ಗೇಶ್ ಅವರು ಸಾರ್ವಜನಿಕರಿಗೆ ತಿಳಿಯದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆ ಟಾಂಗಾ ಏರಿ ಮೈಸೂರು ನಗರ ಪ್ರದಕ್ಷಿಣೆ ನಡೆಸಿದ್ದಾರೆ.

ಕೆ.ಆರ್.ಸರ್ಕಲ್ ಮುಖಾಂತರ  ನಟ ಜಗ್ಗೇಶ್ ಟಾಂಗಾ ಏರಿ ನಗರದಲ್ಲಿ ಸಾಗಿದರು.  ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾರ್ವಜನಿಕರಿಗೆ ತಿಳಿಯದಂತೆ ಜಯಚಾಮರಾಜೇಂದ್ರ ವೃತ್ತದಲ್ಲಿ ಕಾಲ್ನಡಿಗೆಯಲ್ಲೇ ಸುತ್ತಾಡಿದ ನಟ ಜಗ್ಗೇಶ್ ಮೈಸೂರು  ನಗರ ಪ್ರದಕ್ಷಿಣೆ ನಡೆಸಿದರು.

ಮೈಸೂರಿನಲ್ಲಿ  ಕಳೆದ  ಹಳೆಯ ನೆನಪುಗಳನ್ನು ಮೆಲಕು ಹಾಕಿರುವ  ನಟ ಜಗ್ಗೇಶ್, ಫೇಸ್ ಬುಕ್ ಮೂಲಕ ಬಾಲ್ಯದ ಸಂತಸ ಹಂಚಿಕೊಂಡಿದ್ದಾರೆ. ಮೈಸೂರಿಗೆ ರಾಜಣ್ಣನ ಸಿನಿಮಾ ನೋಡಲು ಬರುತ್ತಿದ್ದೆ. ಅಮ್ಮನ ಜೊತೆ ಶ್ರೀರಾಮಪುರದಿಂದ ನವರಂಗ ಚಿತ್ರಮಂದಿರಕ್ಕೆ ಹೋಗಿದ್ದೆ. ಅಲ್ಲಿ ಕೃಷ್ಣದೇವರಾಯನ ಚಿತ್ರ ನೋಡಿದ್ದ ನೆನಪು ಕಾಡಿತು. ನಾವು ಮಕ್ಕಳಂತೆ ಸಂತೋಷವಾಗಿ ಬದುಕಬಹುದು ಎಂದು ತಮ್ಮ ಫೇಸ್ ಬುಕ್ ಪೇಜ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ತೋತಾಪುರಿ’ ಚಿತ್ರದ ಚಿತ್ರೀಕರಣಕ್ಕಾಗಿ ನವರಸ ನಾಯಕ ನಡ ಜಗ್ಗೇಶ್  ಮೈಸೂರಿಗೆ ಬಂದಿದ್ದು,  ತಿ.ನರಸೀಪುರ ತಾಲೂಕಿನ ಯಾಚೇನಳ್ಳಿ ವಯಸ್ಸಾದವರೊಬ್ಬರು   30ವರ್ಷದಿಂದ ಅವರ ಸಿನಿಮಾ ನೋಡಿಕೊಂಡು ಬಂದಿದ್ದ ಹಿರಿಯರು,ಜಗ್ಗೇಶ್ ಅವರನ್ನು ಕಾಣಲು ಬಂದಿದ್ದರಂತೆ. ಅದಕ್ಕೆ ಅವರ ಹೃದಯ ತುಂಬಿ ಬಂದಿದೆಯಂತೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: