ಮನರಂಜನೆ

`ಯುವರತ್ನ’ ಟೀಸರ್ ರಿಲೀಸ್ ಗೆ ದಿನಾಂಕ ನಿಗದಿ

ಬೆಂಗಳೂರು,ಸೆ.19-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಯುವರತ್ನ’ ಸಿನಿಮಾದ ಟೀಸರ್ ಸದ್ಯದಲ್ಲೇ ರಿಲೀಸ್ ಆಗಲಿದೆ. ಈ ವಿಚಾರವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.

ಇಂದು ಚಿತ್ರದ ಟೀಸರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಿದೆ ಚಿತ್ರತಂಡ. ಈ ಮೂಲಕ ಅಭಿಮಾನಿಗಳ ಮನ ತಣಿಸುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಟೀಸರ್ ದಸರ ಹಬ್ಬಕ್ಕೆ ರಿಲೀಸ್ ಆಗುವ ಸಾಧ್ಯತೆ ಇದೆ.

ಮೊನ್ನೆ ಮೊನ್ನೆಯಷ್ಟೆ ಪವರ್ ಸ್ಟಾರ್ ಟೀಸರ್ ಗಾಗಿ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಯುವರತ್ನ ಚಿತ್ರದ ಚಿತ್ರೀಕರಣ ಸಹ ಈಗಾಗಲೇ ಸಾಕಷ್ಟು ಮುಗಿದಿದೆ. ಸದ್ಯ ಮೈಸೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ ಚಿತ್ರತಂಡ. ಚಿತ್ರದಲ್ಲಿ ಪವರ್ ಸ್ಟಾರ್ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಗೆ ಜೋಡಿಯಾಗಿ ಸಾಯೇಷಾ ಸೈಗಲ್ ಅಭಿನಯಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: