ಪ್ರಮುಖ ಸುದ್ದಿಮೈಸೂರು

ನಾಳೆಯಿಂದ ಜೆಎಸ್ಎಸ್ ಫಾರ್ಮಸಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

ಔಷಧೀಯ ಸಸ್ಯಗಳ ಇತ್ತೀಚಿನ ಸಂಶೋಧನೆಗಳು : ವಿಷಯ ಮಂಡನೆ

ಮೈಸೂರು. ಸೆ.19: ಜಿಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಜೆಎಸ್ಎಸ್ ಕಾಲೇಜು ಆಫ್ ಫಾರ್ಮಾಸಿ ವತಿಯಿಂದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಆಯೋಜಕ ಕಾರ್ಯದರ್ಶಿ ಡಾ.ಕೆ.ಮೃತ್ಯುಂಜಯ ತಿಳಿಸಿದರು.

ರಿಸೆಂಟ್ ಟ್ರೆಂಡ್ಸ್ ಇನ್ ಪೈಟೋಕೆಮಿಸ್ಟ್ರಿ ವಿಷಯವಾಗಿ  ಸೆ.20 ಮತ್ತು 21 ರಂದು  ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ನಡೆಯುವ‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಬೆಳಗಾವಿಯ ಎನ್ ಐಟಿಎಂ ನ ಐಸಿಎಂಆ ರ್ ನಿರ್ದೇಶಕ ಡಾ.ಎಸ್.ಎಲ್. ಹೋಠಿ ಮುಖ್ಯ ಅತಿಥಿಯಾಗಿರುವರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ‌.ಎಂ‌.ಪ್ರಮೋದ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುಲಸಚಿವ ಡಾ‌.ಬಿ.ಸುರೇಶ್, ಡಾ‌.ಹೆಚ್.ಬಸವಗೌಡಪ್ಪ  ಹಾಜರಿರಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ವಿಚಾರ ಗೋಷ್ಠಿಗಳಲ್ಲಿ ಹಲವಾರು ವಿದ್ವಾಂಸರು ಭಾಗಿಯಾಗಿ ಔಷಧೀಯ ಸಸ್ಯಗಳು, ಅವುಗಳಿಂದ ಆರೋಗ್ಯದ ಮೇಲಾಗುವ ಪರಿಣಾಮ-ದುಷ್ಪರಿಣಾಮಗಳ ಬಗ್ಗೆ ವಿಷಯ ಮಂಡಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಎಂ.ಪ್ರಮೋದ್ ಕುಮಾರ್ ಹಾಗೂ ಡಾ.ಸುರೇಶ್ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: