ಸುದ್ದಿ ಸಂಕ್ಷಿಪ್ತ

ಸೆ.21 ರಂದು ಮಕ್ಕಳಿಗಾಗಿ ದಸರಾ ಚಿತ್ರಕಲಾ ಸ್ಪರ್ಧೆ

ಮೈಸೂರು,ಸೆ.19-ಹಿರಿಯ ವಿದ್ವಾಂಸ ಶಿಕಾರಿಪುರ ಹರಿಹರೇಶ್ವರ ಸಂಸ್ಮರಣಾರ್ಥ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಸೆ.21 ರಂದು ಮಧ್ಯಾಹ್ನ 1.30ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀರಾಮಮಂದಿರದಲ್ಲಿ ಮಕ್ಕಳಿಗಾಗಿ ದಸರಾ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಕುಂಚ ಕಲಾವಿದ ಎಲ್.ಶಿಲಿಂಗಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಪುಷ್ಪಾ ಅಯ್ಯಂಗಾರ್, ಡಾ.ಜಮುನಾರಾಣಿ ಮಿರ್ಲೆ ಆಗಮಿಸಲಿದ್ದಾರೆ. ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. (ಎಂ.ಎನ್)

Leave a Reply

comments

Related Articles

error: