ಮೈಸೂರು

‘ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ಒಂಭತ್ತು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ’

ಮೈಸೂರು,ಸೆ.20:-  ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಳು ಇತ್ತೀಚಿಗೆ ಮೈಸೂರಿನ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಹಾಗೆಯೇ ಒಂಭತ್ತು ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಟೆನ್ನಿಕಾಯ್ಟ್: ಬಾಲಕರ ವಿಭಾಗದಲ್ಲಿ ನಡೆದ ಜಿಲ್ಲಾಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಹೆಚ್.ಎಸ್.ತೇಜಸ್, ಸುಮಂತ್ ಗೌಡ, ಪಿ.ಎ.ಹೃತಿಕ್, ವಚನ್ ಆರ್.ಗೌಡ ಇವರು ಪ್ರಥಮ ಬಹುಮಾನ ಪಡೆಯುವುದರೊಂದಿಗೆ ವಚನ್ ಆರ್.ಗೌಡ ಮತ್ತು ಸುಮಂತ್ ಗೌಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕರಾಟೆ: ಬಾಲಕರ ವಿಭಾಗದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಿ.ಯೋಗಿತ್, ಆರ್.ದೀಪಕ್, ಲಿಖಿತ್ ರಾಜ್ ಇವರುಗಳು ಚಿನ್ನದ ಪದಕವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅಲ್ವಿನ್ ಜೋಯ್ಫುಲ್ ಬೆಳ್ಳಿಪದಕ ಮತ್ತು ರಕ್ಷಿತ್ ಗೌಡ ಕಂಚಿನ ಪದಕನ್ನು ಪಡೆದಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ  ಹಿಮ ಪ್ರಸಾದ್ ಬೆಳ್ಳಿಪದಕವನ್ನು ಪಡೆದಿರುತ್ತಾರೆ.

ಲಯಬದ್ಧ ಯೋಗ: ಜಿಲ್ಲಾಮಟ್ಟದ ಲಯಬದ್ಧ ಯೋಗದಲ್ಲಿ  ರಿತಿಕಾ ಚಿನ್ನದ ಪದಕವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಚೆಸ್: ಬಾಲಕಿಯರ ಜಿಲ್ಲಾಮಟ್ಟದ ಚೆಸ್ ಮಂದ್ಯಾಟದಲ್ಲಿ   ಅನುಷಾ ಹಿರೇವಡೆಯರ್ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಈಜು ಸ್ಪರ್ಧೆ: ಬಾಲಕರ ಜಿಲ್ಲಾಮಟ್ಟದ 50ಎಂ ಬ್ಯಾಕ್‍ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ರಾಘವ ದೀಕ್ಷಿತ್ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ದೊಣ್ಣೆ ವರಸೆ: ಬಾಲಕರ ಜಿಲ್ಲಾಮಟ್ಟದ ದೊಣ್ಣೆ ವರಸೆಯಲ್ಲಿ ಬಿ.ತೇಜಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳು  ಅಭಿನಂದನೆ ಸಲ್ಲಿಸಿರುತ್ತಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಪಿ. ಹರೀಶ್, ಭೌತಶಾಸ್ತ್ರ ಪ್ರಾಚಾರ್ಯ ಎಚ್.ಎಸ್. ರಂಗನಾಥ್, ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ, ಖಜಾಂಜಿ ಎಸ್. ಮನೋಹರ್, ಆಡಳಿತಾಧಿಕಾರಿ ಡಾ. ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ  ಇವರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: