ಮೈಸೂರು

ಅಕ್ರಮ ಮರಳು ಸಾಗಾಟಕ್ಕೆ ಯತ್ನ : ಲಾರಿ ಸಮೇತ ಇಬ್ಬರು ವಶಕ್ಕೆ

ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಲಾರಿಯಲ್ಲಿ ಸಾಗಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಸೌತ್ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿ, ಲಾರಿಯನ್ನು ತಮ್ಮ ವಶಕ್ಕೆ ಪಡೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಬಂಧಿತರನ್ನು ಬನ್ನೂರಿನ ನಿವಾಸಿಗಳಾದ ಶಶಿ ಮತ್ತು ಅಭಿ ಎಂದು ಗುರುತಿಸಲಾಗಿದೆ. ಇವರು ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಬನ್ನೂರಿನಿಂದ ಮೈಸೂರು ಕಡೆಗೆ ಹೊರಟಿದ್ದರು.  ಈ ವೇಳೆ ಗಸ್ತು ತಿರುಗುತ್ತಿದ್ದ ಸೌತ್ ಸಬ್ ಇನ್ಸಪೆಕ್ಟರ್ ಜಯಪ್ರಕಾಶ್ ಕಣ್ಣಿಗೆ ಬೀಳುತ್ತಿದ್ದಂತೆ ಲಾರಿಯನ್ನು ತಿರುಗಿಸಿ ಹೋಟೆಲೊಂದರಲ್ಲಿ ನುಗ್ಗಿಸಲು ಯತ್ನಿಸಿದರು. ಆದರೆ  ಅಷ್ಟರಲ್ಲಾಗಲೇ ಸ್ಥಳಕ್ಕಾಗಮಿಸಿದ ಜಯಪ್ರಕಾಶ್ ಲಾರಿ ಚಾಲಕ ಮತ್ತು ಕ್ಲೀನರ್ ನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯನ್ನು ಪರಿಶೀಲಿಸಲಾಗಿ ಈ ಹಿಂದೆಯೂ ಮೂರ್ನಾಲ್ಕು ಬಾರಿ ಈ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂಬ ದೂರುಗಳು  ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ  ದಾಖಲಾಗಿದ್ದವಲ್ಲದೇ, ದಂಡವನ್ನೂ ವಿಧಿಸಲಾಗಿತ್ತು.

ಇದೀಗ ಲಾರಿಯಲ್ಲಿ ಮಾಲು ಸಮೇತ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ.

ಡಿಸಿಆರ್ ಬಿ ಪೊಲೀಸ್ ಗೋಪಾಲಕೃಷ್ಣ ನೇತೃತ್ದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಸತೀಶ್, ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು. ಸಿಟಿಟುಡೆಯೊಂದಿಗೆ ಮಾತನಾಡಿದ ಗೋಪಾಲಕೃಷ್ಣ ಅಕ್ರಮ ಮರಳು ಸಾಗಣೆ ತಡೆಗೆ ವಿಶೇಷ ತಂಡ ರಚಿಸಿ ರಾತ್ರಿಯ ವೇಳೆ ಗಸ್ತು ತಿರುಗಲಾಗುವುದು ಎಂದಿದ್ದಾರೆ.

Leave a Reply

comments

Related Articles

error: