ಮನರಂಜನೆ

ನೂರು ಕೋಟಿ ಕ್ಲಬ್ ಗೆ ಪ್ರವೇಶ ಪಡೆದ ‘ಫೈಲ್ವಾನ್’ ?

ರಾಜ್ಯ(ಬೆಂಗಳೂರು)ಸೆ.20:- ಕಿಚ್ಚ ಸುದೀಪ್ ಅಭಿನಯದ  ಬಹುನಿರೀಕ್ಷಿತ ಚಿತ್ರ ನೂರು ಕೋಟಿ ಕ್ಲಬ್ ಗೆ ಪ್ರವೇಶ ಪಡೆದಿದೆ.

ಪೈಲ್ವಾನ್ ಸಿನಿಮಾ ಕಳೆದ ಗುರುವಾರ ವಿಶ್ವದಾದ್ಯಂತ ತೆರೆಕಂಡಿತ್ತು.   ಬಿಡುಗಡೆಯಾದ ದಿನವೇ ಪೈರಸಿಗೆ ಬಲಿಯಾಗಿದ್ದರೂ ಸಹ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದೆ.

ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಸೇರಿ ಪೈಲ್ವಾನ್ ಕಲೆಕ್ಷನ್ 7 ದಿನಕ್ಕೆ ಅಂದಾಜು 102 ಕೋಟಿ ರೂ. ಗಳಿಸಿ, ಮುನ್ನುಗುತ್ತಿದೆ. ಚಿತ್ರತಂಡ ಈ ಬಗ್ಗೆ ಯಾವುದೇ ರೀತಿ ಸ್ಪಷ್ಟನೆ ಕೊಟ್ಟಿಲ್ಲವಾದರೂ, ಆಯಾ ಭಾಷೆಯ ಸಿನಿ ವಿಮರ್ಶಕರು ಈ ರೀತಿ ಲೆಕ್ಕಾಚಾರ ಮಾಡಿದ್ದಾರೆ.

ಮೊದಲ ದಿನ 17 ಕೋಟಿ ರೂ ಗಲ್ಲಾಪೆಟ್ಟಿಗೆ ಸೇರಿದರೆ, ಎರಡನೇ ದಿನ 15, ಮೂರನೇ ದಿನ 14, ನಾಲ್ಕನೇ ದಿನ 18, ಐದನೇ ದಿನ 11.1, ಆರನೇ ದಿನ 9.4 ಹಾಗೂ ಏಳನೇ ದಿನ 8.2 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: